spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಂಜೆ ಕಾಫಿ ಕುಡಿಯದಿದ್ರೂ ಪರವಾಗಿಲ್ಲ, ವಾಕಿಂಗ್‌ ಮಾತ್ರ ತಪ್ಪಿಸಬೇಡಿ.. ಏಕೆ ಗೊತ್ತಾ?

- Advertisement -Nitte

ತುಂಬಾ ಜನ ಬೆಳಗ್ಗೆ ವಾಕಿಂಗ್‌ ಮಾಡುತ್ತಾರೆ. ಆದರೆ ಸಂಜೆ ವಾಕಿಂಗ್‌ ಮಾಡುವ ಅಭ್ಯಾಸ ಇರುವುದಿಲ್ಲ. ಆದರೆ ಇನ್ಮುಂದೆ ಸಂಜೆ ಕೂಡ ವಾಕಿಂಗ್‌ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ. ನೀವು ಸಂಜೆ ಸ್ನ್ಯಾಕ್ಸ್‌, ಟೀ/ಕಾಫಿ ಕುಡಿಯದಿದ್ರೂ ಪರವಾಗಿಲ್ಲ. ಆದರೆ ವಾಕಿಂಗ್‌ ಮಾತ್ರ ಮಿಸ್‌ ಮಾಡಲೇ ಬೇಡಿ. ಏಕೆಂದ್ರೆ ಇದರಿಂದ ಸಾಕಷ್ಟು ಲಾಭವಿದೆ.

ತೂಕ ಕಡಿಮೆ:
ಕೇವಲ ವಾಕಿಂಗ್ ಮಾಡಿದರೆ ಮೂಡ್ ಪ್ರೆಶ್ ಆಗುತ್ತದೆ ಎಂಬುದೊಂದೆ ಅಲ್ಲ. ತೂಕ ಕಡಿಮೆ ಮಾಡಿಕೊಳ್ಳಬಹುದು. ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ. ಮನೆಯ ಒಳಗೆ ನೂರು ಮೀಟರ್ ಓಡಾಡುವುದೂ ಒಂದೇ ಮನೆಯ ಹೊರಗೆ 10 ಮೀಟರ್ ಓಡಾಡುವುದು ಒಂದೆ. ವಾಕಿಂಗ್ ಮಾಡಿದರೆ ಬೇಗ ತೂಕ ಕಡಿಮೆ ಮಾಡಿಕೊಳ್ಳಬಹುದು.

ಹೈ ಬ್ಲಡ್ ಪ್ರೆಶರ್:
ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು  ಒಂದು ದಿನವೂ ತಪ್ಪಿಸದೇ ಸಂಜೆ ವಾಕಿಂಗ್‌ ಮಾಡಿ. 10,000 ಹೆಜ್ಜೆಗಳನ್ನು ನಡೆಯುವುದು ಸಿಸ್ಟೊಲಿಕ್ ಮತ್ತು ಡಯಾಸ್ಟೊಲಿಕ್ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನವೊಂದು ಬಹಿರಂಗ ಮಾಡಿದೆ.

ಆರೋಗ್ಯ ವೃದ್ಧಿ:
ದಿನವೂ ಅದೇ ಟ್ರಾಪಿಕ್, ವರ್ಕ್, ಮನೆ ಎಲ್ಲ ಒಂದೇ ರುಟಿನ್, ಬದುಕು ಬೇಸರವಾಗುತ್ತದೆ. ಆಗಲೇ ಅರೋಗ್ಯದಲ್ಲಿಯೂ ಏರುಪೇರಾಗುವುದು, ಹೀಗಿದ್ದಾಗ ದಿನವೂ ಒಂದು ವಾಕಿಂಗ್ ಮಾಡಿದರೆ ನಿಮಲ್ಲಿಯೇ ಒಂದು ಬದಲಾವಣೆ ಬರುತ್ತದೆ. ಮನಸ್ಸಿಗೆ ನೆಮ್ಮದಿ ಸಿಕ್ಕಾಗ ಆರೋಗ್ಯ ಸುಧಾರಿಸುತ್ತದೆ.

ನಿದ್ರಾಹೀನತೆ:
ತುಂಬಾ ಜನ ಈ ನಿದ್ರಾ ಹೀನತೆ ಸಮಸ್ಯೆಯಿಂದ ಒದ್ದಾಡುತ್ತಾರೆ. ಆದರೆ ಸಂಜೆ ವಾಕಿಂಗ್‌ ಮಾಡುವುದರಿಂದ ನಿದ್ರಾಹೀನತೆ ಸಮಸ್ಯೆ ಕಡಿಮೆ ಆಗುತ್ತದೆ. 2017ರಲ್ಲಿ ನಡೆದ ಒಂದು ಸರ್ವೆ ಪ್ರಕಾರ ಯಾರು ಬೆಳಗ್ಗೆ, ಸಂಜೆ ವಾಕಿಂಗ್ ಮಾಡುತ್ತಾರೋ ಅವರು ರಾತ್ರಿ ಚೆನ್ನಾಗಿ ನಿದ್ದೆ ಮಾಡುತ್ತಾರಂತೆ. ಇದನ್ನು ನೀವೇ ಟ್ರೈ ಮಾಡಿ ನೋಡಿ.

ಪಾಸಿಟಿವ್‌ ಎನರ್ಜಿ:
ಸಂಜೆ ನಡಿಗೆಯಿಂದ  ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ ಎಂದು 2010ರಲ್ಲಿ ನಡೆದ ಅಧ್ಯಯನದಲ್ಲಿ ಇದು ತಿಳಿದು ಬಂದಿದೆ. ವಾಕಿಂಗ್ ಮಾಡುವರಲ್ಲಿ ಪಾಸಿಟಿವಿಟಿ ತುಂಬಾ ಇರುತ್ತದೆ. ಏನೇ ಬಂದರೂ ಎದುರಿಸುತ್ತೇನೆ ಎಂಬ ಮನಸ್ಥಿತಿ ಬರುತ್ತದೆ. ನಿಮ್ಮ ಪಾಸಿಟಿವಿಟಿ ಹೆಚ್ಚಿಸಿಕೊಳ್ಳಲು ವಾಕಿಂಗ್ ಮಾಡಿ.

ರೋಗ ನಿರೋಧಕತೆಗೆ ಹೆಚ್ಚಾಗುತ್ತದೆ 
ಸಂಜೆ ವಾಕಿಂಗ್‌ ಮಾಡುವುದರಿಂದ  ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಹೃದಯ ಬಡಿತವನ್ನು ಸುಧಾರಿಸುತ್ತದೆ. ಕೋವಿಡ್‌ನ ಈ ಸಮಯದಲ್ಲಿ ರೋಗನಿರೋಧಕ ಶಕ್ತಿ ಅತ್ಯವಶ್ಯ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss