ಜಗತ್ತಿನ ಎಲ್ಲ ಸಾಧನಗಳಲ್ಲಿಯೂ ಭಾರತ ನಿರ್ಮಿತ ಚಿಪ್ ಇರಬೇಕು: ಇದು ನಮ್ಮ ಕನಸು ಎಂದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಜಗತ್ತಿನ ಎಲ್ಲ ಸಾಧನಗಳಲ್ಲಿಯೂ ಭಾರತ ನಿರ್ಮಿತ ಚಿಪ್ ಇರಬೇಕೆನ್ನುವುದು ನಮ್ಮ ಕನಸು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಉತ್ತರಪ್ರದೇಶದ ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್ಪೋ ಮಾರ್ಟ್‌ನಲ್ಲಿ ನಡೆದ 2024ರ ಸೆಮಿಕಾನ್ ಇಂಡಿಯಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿಪ್‌ಗಳು ಕೇವಲ ತಂತ್ರಜ್ಞಾನದ ರೂಪವಾಗಿರಬಾರದು. ಅದು ಜನರ ಆಸೆಗಳನ್ನು ಈಡೇರಿಸುವ ಮಾಧ್ಯಮವಾಗಬೇಕು ಎಂದು ತಿಳಿಸಿದರು.

ಇಂತಹ ದೊಡ್ಡಮಟ್ಟದ ಕಾರ್ಯಕ್ರಮ ನಿಯೋಜಿಸುವಲ್ಲಿ ಭಾರತ ವಿಶ್ವದಲ್ಲೇ 8ನೇ ಸ್ಥಾನದಲ್ಲಿದೆ. 2028ರ ವೇಳೆಗೆ ಸೆಮಿಕಂಡಕ್ಟರ್ ಮಾರುಕಟ್ಟೆಯು 8,030 ಕೋಟಿ ತಲುಪಲಿದ್ದು, 85,000 ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಇದಕ್ಕಾಗಿ 1.4 ಲಕ್ಷ ಕೋಟಿಗೂ ಅಧಿಕ ಹೂಡಿಕೆ ಮಾಡಲಾಗಿದ್ದು, ಹಲವು ಯೋಜನೆಗಳು ಪ್ರಗತಿಯಲ್ಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!