Wednesday, July 6, 2022

Latest Posts

ಪದಾರ್ಪಣೆ ಪಂದ್ಯದಲ್ಲಿ ಮಿಂಚಿದ ಅಯ್ಯರ್: ಭಾರತ ಮೊದಲ ದಿನ 258/4

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯೂಜಿಲ್ಯಾಂಡ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ ಮೊದಲ ದಿನ ಶ್ರೇಯಸ್​ ಅಯ್ಯರ್ (75)​ ಮತ್ತು ರವೀಂದ್ರ ಜಡೇಜಾ (50) ಅವರ ಅಜೇಯ ಅರ್ಧಶತಕದ ನೆರವಿನಿಂದ 4 ವಿಕೆಟ್​ ಕಳೆದುಕೊಂಡು 258 ರನ್​ಗಳಿಸಿದೆ.
ಕಾನ್ಪುರದ ಗ್ರೀನ್​ ಪಾರ್ಕ್​ ಸ್ಟೇಡಿಯಂನಲ್ಲಿ ಟಾಸ್​ ಗೆದ್ದ ಭಾರತ ತಂಡದ ನಾಯಕ ರಹಾನೆ ಮೊದಲಿಗೆ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆರಂಭಿಕರಾಗಿ ಕಣಕ್ಕಿಳಿದಿದ್ದ ಮಯಾಂಕ್​ ಅಗರ್​ವಾಲ್ ಕೇವಲ 13 ರನ್​ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಶೆ ಅನುಭವಿಸಿದರು.21ರನ್​ಗಳಿಗೆ 1 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಯುವ ಬ್ಯಾಟರ್​ ಶುಬ್ಮನ್​ ಗಿಲ್​ ಮತ್ತು ಪೂಜಾರ 2ನೇ ವಿಕೆಟ್​ಗೆ 61 ರನ್​ಗಳ ಜೊತೆಯಾಟ ನಡೆಸಿ ಚೇತರಿಕೆ ನೀಡಿದರು.
ಆದರೆ ಭೋಜನ ವಿರಾಮದ ಬಳಿಕ 52 ರನ್​ಗಳಿಸಿದ್ದ ಗಿಲ್​ ಜೇಮಿಸನ್‌ಗೆ 2ನೇ ಬಲಿಯಾದರೆ , 26 ರನ್​ಗಳಿಸಿದ್ದ ಪೂಜಾರ ಸೌಥಿಗೆ ವಿಕೆಟ್​ ಒಪ್ಪಿಸಿದರು. ಇವರ ನಂತರ ಬಂದ ನಾಯಕ ಅಜಿಂಕ್ಯ ರಹಾನೆ ಕೂಡ 63 ಎಸೆತಗಳಲ್ಲಿ 35 ರನ್​ಗಳಿಸಿ ಜೇಮಿಸನ್​ಗೆ 3ನೇ ಬಲಿಯಾದರು.
ಅಯ್ಯರ್​-ಜಡೇಜಾ ಶತಕದ ಜೊತೆಯಾಟ
154 ರನ್​ಗಳಾಗುವಷ್ಟರಲ್ಲಿ 4 ವಿಕೆಟ್​ ಕಳೆದುಕೊಂಡು ಆಘಾತಕ್ಕೆ ಒಳಗಾಗಿದ್ದ ಭಾರತಕ್ಕೆ ಪದಾರ್ಪಣೆ ಬ್ಯಾಟರ್​ ಶ್ರೇಯಸ್​ ಮತ್ತು ಜಡೇಜಾ ಜೋಡಿ ಕಿವೀಸ್​ ಬೌಲರ್​ಗಳನ್ನು ಯಶಸ್ವಿಯಾಗಿ ಎದುರಿಸಿ 5ನೇ ವಿಕೆಟ್​ಗೆ ಮುರಿಯದ 113 ರನ್​ಗಳ ಜೊತೆಯಾಟ ನಡೆಸಿದ್ದಾರೆ.
ಶ್ರೇಯಸ್​ ಅಯ್ಯರ್​ 136 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್​ಗಳ ಸಹಿತ ಅಜೇಯ 75 ಮತ್ತು ಜಡೇಜಾ 100 ಎಸೆತಗಳಲ್ಲಿ ಅಜೇಯ 50 ರನ್​ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss