Thursday, August 18, 2022

Latest Posts

ನಿಫಾ ವೈರಲ್ ಭೀತಿ: ತಮಿಳುನಾಡಿನಲ್ಲಿ ಅ. 31ರವರೆಗೂ ಸಭೆ-ಸಮಾರಂಭಗಳಿಗೆ ನಿರ್ಬಂಧ ವಿಸ್ತರಣೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆಮಾಸ್ಕ್ ಧರಿಸಿಸಾಮಾಜಿಕ ಅಂತರ ಕಾಯ್ದುಕೊಳ್ಳಿಕೈಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿನೀವೂ ಸುರಕ್ಷಿತರಾಗಿರಿನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್ಲೈನ್ ಡೆಸ್ಕ್:

ನಿಫಾ ವೈರಸ್ ಅಟ್ಟಹಾಸ ಕೇರಳದಲ್ಲಿ ಹೆಚ್ಚುತ್ತಿರುವ ಹಿನ್ನೆಲೆ, ತಮಿಳುನಾಡಿನಲ್ಲಿಯೂ ನಿಫಾ ಭೀತಿ ಎದುರಾಗಿದೆ. ಈ ಹಿನ್ನೆಲೆ ಹಬ್ಬ, ಸಭೆ, ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅ.31ರವೆರೆಗೂ ಸಿಎಂ ಎಂ. ಕೆ. ಸ್ಟಾಲಿನ್ ನಿಷೇಧ ವಿಸ್ತರಿಸಿದ್ದಾರೆ.

“ನೆರೆಯ ರಾಜ್ಯ ಕೇರಳದಲ್ಲಿ ಕೋವಿಡ್ ಸೋಂಕು ಹಾಗೂ ನಿಫಾ ವೈರಸ್ ಏಕಾಏಕಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿಷೇಧವನ್ನು ಹೇರಲಾಗಿದೆ. ಮೂರನೆ ಅಲೆಯ ತೀವ್ರತೆಯನ್ನು ತಡೆಗಟ್ಟಲು ಪ್ರತಿಯೊಬ್ಬರು ಹಬ್ಬ-ಹರಿದಿನಗಳನ್ನು ಮನೆಯಲ್ಲಿಯೇ ಸರಳವಾಗಿ ಆಚರಿಸಿ” ಎಂದು ಸಾರ್ವಜನಿಕರಲ್ಲಿ ಸ್ಟಾಲಿನ್ ವಿನಂತಿಸಿದ್ದಾರೆ.

ಅಕ್ಟೋಬರ್ 31ರವರೆಗೆ ತಮಿಳುನಾಡಿನಲ್ಲಿ ಯಾವುದೇ ಸಾರ್ವಜನಿಕ ಸಮಾರಂಭ, ಸಮಾವೇಶ, ದಾರ್ಮಿಕ ಕೂಟ ಮಾಡುವಂತಿಲ್ಲ. ಕಟ್ಟುನಿಟ್ಟಾಗಿ ಈ ನಿಯಮವನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಟಾಲಿನ್ ಎಚ್ಚರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!