ಟಾಟಾ ಸ್ಟೀಲ್ ಕೋಕ್ ಪ್ಲಾಂಟ್‌ನಲ್ಲಿ ಸ್ಫೋಟ 

ಹೊಸದಿಗಂತ ಡಿಜಿಟಲ್‌ ಡೆಸ್ಕ್‌  

ಜಾರ್ಖಂಡ್ ದ ಜೆಮ್‌ಶೆಡ್‌ಪುರದಲ್ಲಿನ ಟಾಟಾ ಸ್ಟೀಲ್ ಕೋಕ್ ಪ್ಲಾಂಟ್‌ನಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ನಂತರ ಅನಿಲ ಸೋರಿಕೆ ಮತ್ತು ಬೆಂಕಿಯ ಘಟನೆಯಿಂದಾಗಿ ಭೀತಿ ಉಂಟಾಗಿದೆ.
ಐಎಂಎಂಎಂ(IMMM) ಕೋಕ್ ಸ್ಥಾವರದ ಬ್ಯಾಟರಿ ಸಂಖ್ಯೆ 6 ಮತ್ತು 7ರಲ್ಲಿ ಅಪಘಾತ ಸಂಭವಿಸಿದೆ.
ಈ ಘಟನೆಯಿಂದಾಗಿ ಪ್ಲಾಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಬ್ಯಾಟರಿ ಸಂಖ್ಯೆ ಐದು, ಆರು, ಏಳು ಇರುವ ಗ್ಯಾಸ್ ಲೈನ್​ನಲ್ಲಿ ಹಾಟ್ ಜಬ್ ಅಂದರೆ ಗ್ಯಾಸ್ ಕಟಿಂಗ್ ಮತ್ತು ವೆಲ್ಡಿಂಗ್ ಕೆಲಸ ನಡೆಯುತ್ತಿತ್ತು.ಆಗ ಗ್ಯಾಸ್ ಲೈನ್​ನಿಂದ ಗ್ಯಾಸ್ ಸೋರಿಕೆಯಾಗತೊಡಗಿತು. ಅದರ ನಂತರ ಸ್ಫೋಟ ಸಂಭವಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!