Saturday, July 2, 2022

Latest Posts

ಮುಕೇಶ್‌ ಅಂಬಾನಿ ಮನೆ ಬಳಿ ಸ್ಫೋಟಕಪತ್ತೆ ಪ್ರಕರಣ: ಇನ್ನೋರ್ವ ಪೊಲೀಸ್‌ ಅಧಿಕಾರಿ ಬಂಧನ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಉದ್ಯಮಿ ಮುಕೇಶ್‌ ಅಂಬಾನಿ ಮನೆ ಬಳಿ ಪತ್ತೆಯಾದ ಸ್ಫೋಟಕಗಳಿದ್ದ ವಾಹನದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಪೊಲೀಸ್‌ ಅಧಿಕಾರಿ ರಿಯಾಜ್‌ ಕಾಜಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಾನುವಾರ ಬಂಧಿಸಿದೆ.
ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ಅವರಿಗೆ ಕಾಜಿ ಆಪ್ತರಾಗಿದ್ದರು. ವಾಜೆ ಜತೆ ಕಾಜಿ ಕಾರ್ಯನಿರ್ವಹಿಸಿದ್ದರು.ಈ ಪ್ರಕರಣದ ಬಗ್ಗೆ ವಿಚಾರಣೆಗಾಗಿ ಭಾನುವಾರ ಕಾಜಿ ಅವರನ್ನು ಕರೆಸಲಾಗಿತ್ತು. ವಿಚಾರಣೆ ಬಳಿಕ ಕಾಜಿ ಅವರನ್ನು ಬಂಧಿಸಲಾಗಿದೆ.
ಮುಕೇಶ್‌ ಅಂಬಾನಿ ಅವರ ಮನೆ ಬಳಿ ಪತ್ತೆಯಾದ ಸ್ಫೋಟಕಗಳಿದ್ದ ವಾಹನಕ್ಕೆ ನಕಲಿ ನಂಬರ್‌ ಪ್ಲೇಟ್‌ ಪಡೆಯಲು ಸಚಿನ್‌ ವಾಜೆ ಅವರಿಗೆ ಕಾಜಿ ನೆರವಾಗಿರಬಹುದು ಎಂದು ಎನ್‌ಐಎ ಅನುಮಾನ ವ್ಯಕ್ತಪಡಿಸಿತ್ತು.
ವಿಖ್ರೊಲಿ ಪ್ರದೇಶದಲ್ಲಿ ನಂಬರ್‌ ಪ್ಲೇಟ್‌ ಅಂಗಡಿಗೆ ತೆರಳಿ ಮಾಲೀಕನ ಜತೆ ಕಾಜಿ ಮಾತುಕತೆ ನಡೆಸಿದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದವು. ಜತೆಗೆ, ಠಾಣೆಯಲ್ಲಿನ ವಾಜೆ ಅವರ ಹೌಸಿಂಗ್‌ ಕಾಂಪ್ಲೆಕ್ಸ್‌ನಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದು ಸಹ ಗೊತ್ತಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss