Sunday, April 11, 2021

Latest Posts

ಅಂಬಾನಿ ನಿವಾಸದ ಬಳಿ ಸ್ಫೋಟಕ ಪತ್ತೆ ಪ್ರಕರಣ: ಕಾರು ಮಾಲೀಕನ ಮೃತದೇಹ ಪತ್ತೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಉದ್ಯಮಿ ಮುಖೇಶ್​​ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕ ತುಂಬಿದ್ದ ಕಾರು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಮಾಲೀಕನ ಮೃತದೇಹ ಥಾಣೆಯಲ್ಲಿ ಪತ್ತೆಯಾಗಿದೆ.
ಒಂದು ವಾರದ ಹಿಂದೆ ಮುಂಬೈನಲ್ಲಿರುವ ಮುಖೇಶ್​​ ಅಂಬಾನಿ ನಿವಾಸ ಆಂಟಿಲಿಯಾ ಬಳಿ 21 ಜಿಲೆಟಿನ್ ಕಡ್ಡಿಗಳನ್ನು ತುಂಬಿದ್ದ ಸ್ಕಾರ್ಪಿಯೋ ಕಾರು ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆ ಆರಂಭಿಸಿದ 10 ಪೊಲೀಸ್ ತಂಡಗಳು, ಮುಂಬೈ ಕ್ರೈಂ ಬ್ರ್ಯಾಂಚ್​ ಹಾಗೂ ಎಟಿಎಸ್​ ಗೆ ಶಾಕಿಂಗ್ ಮಾಹಿತಿ ಸಿಕ್ಕಿದೆ.
ಕಾರನ್ನು ಪಾರ್ಕ್‌ ಮಾಡಿರುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮನೆಯ ಮುಂದೆ ಸ್ಕಾರ್ಪಿಯೋ ಕಾರು ನಿಲ್ಲಿಸಿದ್ದ ವ್ಯಕ್ತಿಯ ಗುರುತನ್ನು ಮುಂಬೈ ಅಪರಾಧ ವಿಭಾಗ​ ಪೊಲೀಸರು ಪತ್ತೆ ಹೆಚ್ಚಿದ್ದರು. ಇದರ ಬೆನ್ನಲ್ಲೇ ಕಾರು ಮಾಲೀಕ ಮನ್​​ಸುಖ್ ಹಿರೇನ್​ ಮೃತದೇಹ ಪತ್ತೆಯಾಗಿದ್ದು, ಅನೇಕ ಅನುಮಾನಗಳನ್ನು ಹುಟ್ಟು ಹಾಕಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss