ಸಿಲಿಂಡರ್ ಸಬ್ಸಿಡಿ ಒಂದು ವರ್ಷ ವಿಸ್ತರಣೆ: ಕೇಂದ್ರ ಸರಕಾರದಿಂದ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಉಜ್ವಲ ಯೋಜನೆಯಡಿ ಪ್ರತಿ ಅಡುಗೆ ಅನಿಲ ಸಿಲಿಂಡರ್‌ಗೆ 200 ರೂಪಾಯಿ ಸಬ್ಸಿಡಿ ನೀಡಲಾಗುತ್ತಿದ್ದ ಅನುದಾನವನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಲಾಗಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದು, ‘ಉಜ್ವಲ ಯೋಜನೆಯಡಿ ಪ್ರತಿ ಅಡುಗೆ ಅನಿಲ ಸಿಲಿಂಡರ್‌ಗೆ 200 ರೂಪಾಯಿ ಸಬ್ಸಿಡಿ ನೀಡಲಾಗುತ್ತಿದ್ದು, ಈ ಅನುದಾನವನ್ನ ಇನ್ನೊಂದು ವರ್ಷಕ್ಕೆ ವಿಸ್ತರಿಸಲಾಗಿದೆ. ಇದ್ರಿಂದ 9.6 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದೆ’ ಎಂದರು.

2016ರಲ್ಲಿ ಪ್ರಾರಂಭವಾದ ಉಜ್ವಲ 1.0 ಯೋಜನೆಯು ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳ ಸುಮಾರು 5 ಕೋಟಿ ಮಹಿಳಾ ಸದಸ್ಯರಿಗೆ ಅಡುಗೆ ಅನಿಲ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿದೆ. ತರುವಾಯ ಏಪ್ರಿಲ್ 2018 ರಲ್ಲಿ, ಯೋಜನೆಯ ಪ್ರಯೋಜನಗಳನ್ನು ಏಳು ಹೆಚ್ಚುವರಿ ವರ್ಗಗಳಿಗೆ (ಪರಿಶಿಷ್ಟ ಜಾತಿಗಳು/ಪರಿಶಿಷ್ಟ ಬುಡಕಟ್ಟುಗಳು, ಪ್ರಧಾನ ಮಂತ್ರಿಗಳ ಆವಾಸ್ ಯೋಜನೆ, ವಿರೋಧಿ ಅನ್ನ ಯೋಜನೆ, ಅತ್ಯಂತ ಹಿಂದುಳಿದ ವರ್ಗಗಳು, ಚಹಾ ತೋಟ, ಅರಣ್ಯ ಪ್ರದೇಶದ ನಿವಾಸಿಗಳು, ದ್ವೀಪಗಳು) ಸೇರಿದ ಮಹಿಳೆಯರಿಗೆ ವಿಸ್ತರಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!