ಹೊಸದಿಗಂತ ಆನ್ ಲೈನ್ ಡೆಸ್ಕ್:
ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀ ರಾಮ ಮಂದಿರದ ಸಂಕೀರ್ಣವನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ 70 ಎಕರೆ ರಾಮ ಜನ್ಮಭೂಮಿ ಆವರಣದ ಪಕ್ಕದಲ್ಲಿರುವ 676.85 ಚದರ ಮೀಟರ್ ಭೂಮಿಯನ್ನು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಖರೀದಿಸಿದೆ.
ಸಂಕೀರ್ಣ ಪ್ರದೇಶವನ್ನು 107 ಎಕರೆಗೆ ವಿಸ್ತರಿಸಲು 676.85 ಚದರ ಮೀಟರ್ ಭೂಮಿಯನ್ನು ಟ್ರಸ್ಟ್ 1 ಕೋಟಿ ರೂ.ಗೆ ಖರೀದಿಸಿದೆ. ದೇವಾಲಯದ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು, ರಾಮ ಮಂದಿರ ಪಕ್ಕದ ಭೂಮಿಯ ಮಾಲೀಕ ಸ್ವಾಮಿ ದೀಪ್ ನಾರಾಯಣ್ ಅವರಿಂದ 1 ಕೋಟಿ ರೂ.ಗೆ ಖರೀದಿಸಿದ್ದು, ಮಂಗಳವಾರ ನೋಂದಣಿ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.
ರಾಮ ಮಂದಿರ ನಿರ್ಮಾಣಕ್ಕೆ ದೇಶದಾದ್ಯಂತ ನಿಧಿ ಸಂಗ್ರಹ ಅಭಿಯಾನ ಶನಿವಾರ ಅಂತ್ಯಗೊಂಡಿದ್ದು, ನಿರೀಕ್ಷೆಗೂ ಮೀರಿ ಬರೋಬ್ಬರಿ 2100 ಕೋಟಿ ರೂಪಾಯಿ ಸಂಗ್ರಹವಾಗಿದೆ.