ಕತಾರ್‌ನಲ್ಲಿ 8 ಭಾರತೀಯರಿಗೆ ಮರಣದಂಡನೆ: ಕುಟುಂಬಸ್ಥರ ಭೇಟಿಯಾದ ವಿದೇಶಾಂಗ ಸಚಿವ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕತಾರ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಎಂಟು ಮಂದಿ ಮಾಜಿ ಸಿಬ್ಬಂದಿಗಳ ಕುಟುಂಬಸ್ಥರನ್ನು ವಿದೇಶಾಂಗ ಸಚಿವ ಎಸ್‌. ಜಯಶಂಕರ್‌ ಭೇಟಿಯಾಗಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ʼಕತಾರ್‌ನಲ್ಲಿ ಬಂಧಿತರಾಗಿರುವ 8 ಭಾರತೀಯರ ಕುಟುಂಬಸ್ಥರನ್ನು ಇಂದು ಬೆಳಗ್ಗೆ ಭೇಟಿಯಾಗಿದ್ದೇನೆ. ಈ ಸಂಬಂಧ ಸರ್ಕಾರವು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ಕುಟುಂಬಗಳ ಕಳವಳ ಮತ್ತು ನೋವನ್ನು ಹಂಚಿಕೊಳ್ಳಲಿದೆ. ಬಂಧಿತರ ಬಿಡುಗಡೆಗೆ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮುಂದುವರಿಸುತ್ತದೆ. ಆ ನಿಟ್ಟಿನಲ್ಲಿ ಅವರ ಕುಟುಂಬಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲಿದೆ’ ಎಂದಿದ್ದಾರೆ.

ಮರಣದಂಡನೆಗೆ ಗುರಿಯಾದ ಎಂಟೂ ಮಂದಿ ಅಲ್ ದಹ್ರಾ ಕಂಪನಿಯ ನೌಕರರಾಗಿದ್ದರು. ಕಳೆದ ವರ್ಷದ ಆಗಸ್ಟ್‌ನಲ್ಲಿ ಇವರನ್ನು ಶಂಕಿತ ಬೇಹುಗಾರಿಕೆ ಆರೋಪದ ಮೇಲೆ ವಶ ಪಡಿಸಿಕೊಳ್ಳಲಾಗಿತ್ತು. ಇವರ ಮೇಲಿನ ಆರೋಪಗಳ ಕುರಿತಾಗಿ ಕತಾರ್‌ ಮಾಹಿತಿಯನ್ನು ನೀಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!