Thursday, February 25, 2021

Latest Posts

ಯುನೈಟೆಡ್ ಏರ್‌ಲೈನ್ ವಿಮಾನ ತುರ್ತು ಭೂಸ್ಪರ್ಶ: ಬೋಯಿಂಗ್ 777 ತನಿಖೆಗೆ ಎಫ್‌ಎಎ ಆದೇಶ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಎಂಜಿನ್ ದೋಷದಿಂದಾಗಿ ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುನೈಟೆಡ್ ಏರ್‌ಲೈನ್ ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದು, ಎಲ್ಲ ಬೋಯಿಂಗ್ 777  ಮಾದರಿಯ ಎಂಜಿನ್‌ಗಳ ತಪಾಸಣೆ ನಡೆಸುವಂತೆ ಅಮೆರಿಕದ ವಿಮಾನಯಾನ ನಿಯಂತ್ರಣ ಸಂಸ್ಥೆ ಯುನೈಟೆಡ್ ಕಂಪನಿಗೆ ಆದೇಶಿಸಿದೆ.
ನಿಯಂತ್ರಣ ಸಂಸ್ಥೆ ತಪಾಸಣೆ ಪೂರ್ಣಗೊಳಿಸಿ, ಈ ಮಾದರಿಯ ಎಂಜಿನ್‌ಗಳನ್ನು ಶಿಫಾರಸ್ಸು ಮಾಡುವವರೆಗೆ ಆ ವಿಮಾನಗಳನ್ನು ತಾತ್ಕಾಲಿಕವಾಗಿ ಸೇವೆಯಿಂದ ತೆಗೆದುಹಾಕುತ್ತಿರುವುದಾಗಿ ಯುನೈಟೆಡ್ ಏರ್‌ಲೈನ್ ಸಂಸ್ಥೆ ಹೇಳಿದೆ.
231 ಪ್ರಯಾಣಿಕರು ಮತ್ತು ಹತ್ತು ಮಂದಿ ಸಿಬ್ಬಂದಿಯೊಂದಿಗೆ ಡೆನ್ವರ್‌ ಅಂತರರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್‌ ಆಫ್‌ ಆಗಿದ್ದ ಯುನೈಟೆಡ್ ಏರ್‌ಲೈನ್ ವಿಮಾನ 328, ಎಂಜಿನ್ ದೋಷದಿಂದಾಗಿ, ತಕ್ಷಣವೇ ತುರ್ತಾಗಿ ಭೂ ಸ್ಪರ್ಶ ಮಾಡಿತ್ತು. ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿರಲಿಲ್ಲ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!