Monday, August 15, 2022

Latest Posts

ಮೆಟಾವರ್ಸ್ ಎಂದು ರೀಬ್ರಾಂಡ್ ಆಗುವತ್ತ ಫೇಸ್‌ಬುಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫೇಸ್‌ಬುಕ್ ಈಗಾಗಲೇ ತನ್ನ ಹೆಸರನ್ನು ಮೆಟಾವರ‍್ಸ್‌ಗೆ ಬದಲಾಯಿಸುವ ಮೂಲಕ ಹಕ್ಕು ಸಾಧಿಸುತ್ತಿದೆ.
ಜನಪ್ರಿಯ ಜಾಲತಾಣ ಫೇಸ್‌ಬುಕ್ ಕಂಪನಿಗೆ ಮೆಟಾವರ್ಸ್ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ.

ಮೆಟಾವರ್ಸ್ ಮುಂದಿನ ದಶಕದಲ್ಲಿ 100 ಕೋಟಿ ಜನರನ್ನು ತಲುಪಲಿದೆ ಹಾಗೂ ಹೆಚ್ಚಿನ ಪಕ್ಷ ವರ್ಚುಯಲ್ ರಿಯಾಲಿಟಿ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ ಎಂದು ಹೇಳಿದ್ದಾರೆ.
ಡಿ.1ರಿಂದ ಫೇಸ್‌ಬುಕ್ NASDQ ಸ್ಟಾಕ್ ಸ್ಟಿಕ್ಕರ್ ಚಿಹ್ನೆ MVRS ಹೆಸರಿನಲ್ಲಿ ಟ್ರೇಡ್ ನಡೆಸಲಿದೆ.

ಮೆಟಾಮರ‍್ಸ್‌ನ್ನು ಸಾಮೂಹಿಕ ಸ್ಥಳವಾಗಿ ನಿರ್ಮಿಸಲು ಬಯಸುತ್ತೇನೆ. ಅಂತರ್ಜಾಲ ಒಂದು ಕಂಪನಿಯಿಂದ ಮಾತ್ರ ಪ್ರಾಬಲ್ಯ ಹೊಂದಿರಬಾರದು ಎಂದು ಜುಕರ್‌ಬರ್ಗ್ ಹೇಳಿದ್ದಾರೆ. ಫೇಸ್‌ಬುಕ್ ಬ್ರಾಂಡಿಂಗ್‌ನ್ನು ಮೆಟಾವರ‍್ಸ್‌ಗೆ ಸಮಾನಾರ್ಥಕವಾಗಿ ಮಾಡುವ ಮೂಲಕ ಫೇಸ್‌ಬುಕ್ ಈಗಾಗಲೇ ಸ್ಪರ್ಧೆಯಲ್ಲಿ ಒಂದು ಹೆಜ್ಜೆ ಮುಂದೆನಡೆದಿದೆ.

ಫೇಸ್‌ಬುಕ್ ಮೆಟಾ ಆಗಿದೆ. ಕೆಲವು ದಿನಗಳಿಂದ ಮೆಟಾ ಆಗಲು ಫೇಸ್‌ಬುಕ್ ತಯಾರಿ ನಡೆಸುತ್ತಿತ್ತು, ಕಂಪನಿಯು ಮೆಟಾ.ಕಾಂನ್ನು ಖರೀದಿಸಿತ್ತು. ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ @meta ಹ್ಯಾಂಡಲ್‌ನ್ನು ಹಿಡಿದಿದೆ. ಆದರೆ ಇನ್ಸ್‌ಟಾಗ್ರಾಂನಲ್ಲಿ ಬದಲಾವಣೆ ಆಗಿಲ್ಲ. ಕಂಪನಿಯು ಮೆನ್ಲೋ ಪಾರ್ಕ್‌ನಲ್ಲಿ ತನ್ನ ಫೇಮಸ್ ಸಿಂಬಲ್ ಥಂಬ್ಸ್‌ಅಪ್‌ನ್ನು ಹೊಸ ಮೆಟಾ ಲೋಗೋವಾಗಿ ಬದಲಾಯಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss