Tuesday, July 5, 2022

Latest Posts

ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲಿ ಕೊರೋನಾವನ್ನು ಎದುರಿಸಿ: ಮುಂಬೈ ಹೈಕೋರ್ಟ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಗಡಿಯಲ್ಲಿ ನಿಂತು ವೈರಸ್ ಹೊರಗೆ ಬರಲೆಂದು ಕಾಯುವ ಬದಲು, ಕೋವಿಡ್​ 19 ವೈರಸ್​ನ್ನ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲಿ ಎದುರಿಸಬೇಕು ಎಂದು​​ ಕೇಂದ್ರ ಸರ್ಕಾರಕ್ಕೆ ಮುಂಬೈ ಹೈಕೋರ್ಟ್ ಹೇಳಿದೆ.
ಚೀಫ್ ಜಸ್ಟೀಸ್ ದಿಪಾಂಕರ್ ದತ್ತಾ ಮತ್ತು ಜಸ್ಟೀಸ್​ ಜಿ ಎಸ್​ ಕುಲಕರ್ಣಿಯವರ ಪೀಠದಲ್ಲಿ ಇಂದು ನಡೆದ ವಿಚಾರಣೆ ವೇಳೆ, ಸರ್ಕಾರದ ‘NEAR TO HOME’ ವ್ಯಾಕ್ಸಿನೇಷನ್​ ಸ್ಕೀಮ್ ಕೇಂದ್ರದ ಬಳಿಗೇ ವೈರಸ್ ಬುರವವರೆಗೂ ಕಾಯುವಂತಿತ್ತು ಎಂದಿದೆ.
ನೀವು ಕೊರೋನಾ ನಮ್ಮ ಅತಿದೊಡ್ಡ ಶತ್ರು ಎಂಬುದನ್ನ ಒಪ್ಪಿಕೊಳ್ಳಬೇಕು, ವೈರಸ್ ಕೇಂದ್ರದವರೆಗೂ ಬರಲಾಗದ ಕೆಲವು ಪ್ರದೇಶಗಳಲ್ಲಿ ಅಥವಾ ಕೆಲವು ವ್ಯಕ್ತಿಗಳಲ್ಲಿ ಉಳಿದುಕೊಂಡಿರಬಹುದು. ನೀವು ಅದನ್ನ ಸರ್ಜಿಲ್ ಸ್ಟ್ರೈಕ್​ನಂತೆ ಎದುರಿಸಬೇಕು. ನೀವು ಗಡಿಗಳಲ್ಲಿ ವೈರಸ್ ನಿಮ್ಮ ಬಳಿಗೆ ಬರಲೆಂದು ಕಾಯುತ್ತಾ ನಿಂತಿದ್ದೀರಿ, ನೀವು ಶತ್ರುವಿನ ಪ್ರದೇಶವನ್ನ ಪ್ರವೇಶಿಸುತ್ತಿಲ್ಲ. ನೀವು ತೆಗೆದುಕೊಂಡ ನಿರ್ಧಾರವನ್ನ ಈ ಹಿಂದೆಯೇ ತೆಗೆದುಕೊಂಡಿದ್ದರೆ ಕೆಲವು ಜೀವಗಳನ್ನ ಉಳಿಸಬಹುದಿತ್ತು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss