ನೂಪುರ್‌ ಶರ್ಮಾಗೆ ದೇಶಾದ್ಯಂತ ಹೆಚ್ಚಿದ ಜನಬೆಂಬಲ: ನೂಪುರ್‌ ಪರ ಧ್ವನಿಯೆತ್ತಿದ ಹಿಂದೂ ಸಮಾಜ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಪ್ರವಾದಿ ಮುಹಮ್ಮದ್ ಕುರಿತಾಗಿ ನೂಪುರ್‌ ಶರ್ಮಾ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ ದೇಶದ ವಿವಿಧೆಡೆ ಹಿಂಸಾಚಾರ ಹಾಗೂ ಮತಾಂಧರಿಂದ ಶಿರಚ್ಛೇದದ ಬೆದರಿಕೆಗಳು ಕೇಳಿಬಂದ ಬೆನ್ನಲ್ಲೇ ಹಿಂದೂ ಸಂಘಟನೆಗಳು ನೂಪುರ್‌ ಪರವಾಗಿ ಬಲವಾದ ಧ್ವನಿ ಎತ್ತಿವೆ.
ಇಸ್ಲಾಮಿಕ್‌ ವಾದಿಗಳಿಂದ ಜೀವ ಬೆದರಿಕೆ ಎದುರಿಸುತ್ತಿರುವ ನೂಪುರ್‌ ಶರ್ಮಾಗೆ ಹಿಂದೂ ಸಮುದಾಯದಿಂದ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದೆ.
ಎರಡು ದಿನಗಳ ವಿಎಚ್‌ಪಿ ಸಭೆಗಾಗಿ ಹರಿದ್ವಾರದಲ್ಲಿ ಸೇರಿರುವ 200 ಕ್ಕೂ ಹೆಚ್ಚು ಸಂತರು ಶರ್ಮಾ ಮತ್ತು ನವೀನ್ ಜಿಂದಾಲ್ ಅವರನ್ನು ಬಲವಾಗಿ ಬೆಂಬಲಿಸಿದ್ದಾರೆ. ಇಸ್ಲಾಮಿಕ್‌ ಮೂಲಭೂತವಾದಿಗಳು ʼಪ್ರವಾದಿಯನ್ನು ದೂಷಿಸಿದ ತಪ್ಪಿತಸ್ಥರು ಕೊಲ್ಲಲು ಅರ್ಹನುʼ ಎಂದು ಪ್ರತಿಪಾದಿಸುತ್ತಿದ್ದಾರೆ. ಹಿಂದೂ ಸಮಾಜವು ಇಂತಹ ನಿರ್ಲಜ್ಜ ಬೆದರಿಕೆಗಳನ್ನು ಸಹಿಸುವುದಿಲ್ಲ ಎಂಬ ಎಚ್ಚರಿಕೆ  ಸಂದೇಶವನ್ನು ಸಭೆಯಲ್ಲಿ ರವಾನಿಸಲಾಗಿದೆ.
ದೇಶದ ವಿವಿಧ ಭಾಗಗಳಲ್ಲಿ ಮುಸ್ಲಿಂ ಸಮುದಾಯವು ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸುತ್ತಿರುವ ಬಗ್ಗೆ ಹರಿದ್ವಾರದ ಸಂತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ʼಶರ್ಮಾ ಅವರು ಮುಸ್ಲಿಮರ ಅಧಿಕೃತ ಹದೀಸ್ ಅನ್ನು ಉಲ್ಲೇಖಿಸಿ ಮಾತನಾಡಿದ್ದಾರೆ. ನೂಪುರ್ ಶರ್ಮಾ ಹೇಳಿಕೆಯು ದ್ವೇಷದ ಭಾಷಣವೇ ಎಂಬುದನ್ನು ನ್ಯಾಯಾಲಯ ನಿರ್ಧರಿಸುತ್ತದೆ. ಹಿಂಸಾಚಾರದ ಮೂಲಕ ಬೀದಿಗಳಲ್ಲಿ ಈ ವಿಚಾರವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ವಿಎಚ್‌ಪಿ ವಕ್ತಾರ ವಿನೋದ್ ಬನ್ಸಾಲ್ ಮುಸ್ಲಿಂ ಸಂಘಟನೆಗಳ ನಡೆ ವಿರುದ್ಧ ಕಿಡಿಕಾರಿದ್ದಾರೆ.
ನೂಪುರ್‌ ಬೆಂಬಲಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತವೆ. ಉತ್ತರ ಪ್ರದೇಶದ ಭದೋಹಿಯಲ್ಲಿ ಬೃಹತ್ ಬೆಂಬಲ ಮೆರವಣಿಗೆ ನಡೆಸಲಾಯಿತು. ಇಡೀ ಹಿಂದೂ ಸಮಾಜವು ನೂಪುರ್ ಶರ್ಮಾ ಅವರನ್ನು ಬೆಂಬಲಿಸುತ್ತಿದೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಹೇಳಿದ್ದಾರೆ.
ಅಂತೆಯೇ, ಅಹಮದಾಬಾದ್‌ನ ಸರ್ಖೇಜ್ ಗಾಂಧಿನಗರ ಹೆದ್ದಾರಿಯಲ್ಲಿ ಜನರು ನೂಪುರ್ ಶರ್ಮಾ ಪರವಾಗಿ ಮೆರವಣಿಗೆ ನಡೆಸಿದರು. ಇಸ್ಕಾನ್ ಕ್ರಾಸ್ ರಸ್ತೆಯಲ್ಲಿ ಸಾಗಿದ ರ್ಯಾಲಿಯಲ್ಲಿ ಶರ್ಮಾ ಮತ್ತು “ಹಿಂದೂ ಐಕ್ಯತೆಯನ್ನು” ಬೆಂಬಲಿಸುವ ಘೋಷಣೆಗಳನ್ನು ಮಾಡಲಾಗಿದೆ.

ಬಿಹಾರದ ಆರಾ ಎಂಬಲ್ಲಿ ನೂಪುರ್ ಶರ್ಮ ಅವರಿಗೆ ಸಮರ್ಥನೆ ನೀಡಿ ಹಿಂದು ಸಂಘಟನೆಗಳು ಮಂಗಳವಾರ ರಾತ್ರಿಯಿಡೀ ಮೇಳ ನಡೆಸಿದವು. ನೂಪುರ್ ಶರ್ಮರಿಗೆ ಏನಾದರೂ ಆದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ಮೊಳಗಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!