ವಿಜ್ಞಾನದ ಪ್ರಕಾರ, ಗರ್ಭಿಣಿ ಮಹಿಳೆಯ ನಡವಳಿಕೆಯು ತನ್ನ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಗರ್ಭಿಣಿಯರು ಒಳ್ಳೆಯ ವಿಷಯಗಳ ಬಗ್ಗೆ ಯೋಚಿಸಲು ಸಲಹೆ ನೀಡುತ್ತಾರೆ. ವಾಸ್ತು ಶಾಸ್ತ್ರದಲ್ಲಿಯೂ ಗರ್ಭಿಣಿಯರಿಗೆ ಕೆಲವೊಂದು ನಿಯಮಗಳನ್ನು ಹೇಳಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ ಗರ್ಭಿಣಿಯರು ದಕ್ಷಿಣಾಭಿಮುಖವಾಗಿ ಮಲಗಬಾರದು. ಈ ದಿಕ್ಕಿನಲ್ಲಿ ಮಲಗುವುದು ದುರಾದೃಷ್ಟ. ಇದು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಮಹಡಿ ಏರುವ ಮೆಟ್ಟಿಲ ಕೆಳಗೆ ಮಲಗಬಾರದು. ಗರ್ಭಿಣಿಯರು ಕಪ್ಪು ಅಥವಾ ಕಡು ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಬಾರದು. 9 ನೇ ತಿಂಗಳವರೆಗೆ ಮಸುಕಾದ ಗುಲಾಬಿ ಬಟ್ಟೆಗಳನ್ನು ಹೆಚ್ಚಾಗಿ ಧರಿಸಬೇಕು.
ಗರ್ಭಿಣಿಯರು ಎಲೆಕ್ಟ್ರಾನಿಕ್ ಉಪಕರಣಗಳಾದ ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳಿಂದ ದೂರವಿರುವುದು ಒಳ್ಳೆಯದು.
ಗರ್ಭಿಣಿ ಇರುವ ಮನೆಯ ಮುಖ್ಯ ಭಾಗ ಆದಷ್ಟು ಖಾಲಿಯಿರುವುದು ಒಳ್ಳೆಯದು. ಹೆಚ್ಚು ಖುರ್ಚಿಗಳಿದ್ದರೆ ಅಲ್ಲಿ ನಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಿರುತ್ತದೆ.