ಇಂದು ಸಿಕ್ಕಿಂ ರಾಜ್ಯ ದಿನಾಚರಣೆ, ಸಿಕ್ಕಿಂ ಬಗ್ಗೆ ನಿಮಗೆ ಗೊತ್ತಿಲ್ಲದ ಸತ್ಯಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರತಿ ವರ್ಷವೂ ಮೇ 16 ರಂದು ಸಿಕ್ಕಿಂ ತನ್ನ ರಾಜ್ಯತ್ವದ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತದೆ. ಸಿಕ್ಕಿಂ ಭಾರತದೊಂದಿಗೆ ಅಧಿಕೃತವಾಗಿ ಸೇರಿದ ದಿನದ ನೆನಪಿನಲ್ಲಿ ಈ ಆಚರಣೆ. ಇಂದಿಗೆ ಸಿಕ್ಕಿಂ ಭಾರತದೊಂದಿಗೆ ಸೇರಿ 47 ವರ್ಷಗಳು ಸಂದಿವೆ. ಈ ಹಿನ್ನೆಲೆಯಲ್ಲಿ ನಿಮಗೆ ಗೊತ್ತಿಲ್ಲದ ಕೆಲವು ಇತಿಹಾಸದ ಅಂಶಗಳು ಇಲ್ಲಿವೆ.

  • 17 ನೇ ಶತಮಾನದಲ್ಲಿ ʼನಮ್ಗ್ಯಾಲ್‌ʼ ರಾಜವಂಶದಿಂದ ಸಿಕ್ಕಿಂ ರಾಜ್ಯವೆಂಬುದು ಸ್ಥಾಪಿತವಾಯಿತು. ಬೌದ್ಧ ಪುರೋಹಿತ ವರ್ಗಕ್ಕೆ ಸೇರಿದ ʼಚೌಗ್ಯಾಲ್‌ʼ ಎಂಬ ಹೆಸರಿನ ರಾಜರು ಮುಂದೆ ಹಲವಾರು ವರ್ಷಗಳ ಕಾಲ ಇಲ್ಲಿ ಆಡಳಿತ ನಡೆಸಿದರು.
  • 1890 ರಲ್ಲಿ ಬ್ರಿಟೀಷ್‌ ರಾಜಪ್ರಭುತ್ವವನ್ನು ಸಿಕ್ಕಿಂ ಒಪ್ಪಿಕೊಂಡಿತು. 1947 ರ ನಂತರ ಭಾರತದೊಂದಿಗೆ ಸಿಕ್ಕಿಂ ರಾಜ್ಯಕ್ಕೂ ಸ್ವಾತಂತ್ರ್ಯದೊರಕಿತು.
  • 1950 ರಲ್ಲಿ ಭಾರತವು ಗಣರಾಜ್ಯವಾದಾಗ ಸಿಕ್ಕಿಂ ಭಾರದೊಂದಿಗೆ ರಕ್ಷಣಾತ್ಮಕ ಒಪ್ಪಂದ ಮಾಡಿಕೊಂಡು ಭಾರತ ರಕ್ಷಣೆಯಲ್ಲಿರುವ ರಾಜ್ಯವಾಗಿ ಮಾರ್ಪಟ್ಟಿತು. ಅಂದರೆ ಸಿಕ್ಕಿಂನ ಆಂತರಿಕ ಅಡಳಿತದಲ್ಲಿ ಸ್ವಾಯತ್ತತೆಯಿದ್ದರೂ ಅದರ ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳು ಭಾರತದಿಂದ ನಿರ್ವಹಿಸಲ್ಪಡುತ್ತಿದ್ದವು.
  • ಆದರೆ ನಂತರ 1971ರಲ್ಲಿ ರಾಜ್ಯವನ್ನಾಳುತ್ತಿದ್ದ ʼಚೌಗ್ಯಾಲ್‌ʼ ರಾಜಮನೆತನದ ವಿರುದ್ಧ ದಂಗೆಗಳು ಪ್ರಾರಂಭವಾಯಿತು. ಅಲ್ಲಿನ ರಾಜನ ಕೋರಿಕೆಯಂತೆ 1974ರಲ್ಲಿ ಭಾರತೀಯ ಸೇನೆಯು ಪ್ರವೇಶಿಸಿ ಆಂತರಿಕ ದಂಗೆಗಳನ್ನು ಹತ್ತಿಕ್ಕಿತು ಮತ್ತು ರಾಜ್ಯವನ್ನು ತನ್ನ ಹಿಡಿತಕ್ಕೆ ತೆಗೆದುಕೋಂಡಿತು.
  • ನಂತರದಲ್ಲಿ ಸಿಕ್ಕಿಂ ಅನ್ನು ಬಾರತಕ್ಕೆ ಸೇರಿಸುವ ಕುರಿತು ಜನಾಭಿಪ್ರಾಯವನ್ನು ಕೈಗೊಳ್ಳಲಾಯಿತು. ಇದರಲ್ಲಿ 97.5 ಮಂದಿ ಭಾರತದ ಪರವಾಗಿ ಮತ ಚಲಾಯಿಸಿದರು.
  • ಈ ಹಿನ್ನೆಲೆಯಲ್ಲಿ ಅಂದಿನ ರಾಷ್ಟ್ರಪತಿಗಳಾದ ಫಕ್ರುದ್ದೀನ್ ಅಲಿ ಅಹ್ಮದ್ ಅವರು ಸಿಕ್ಕಿಂ ಅನ್ನು ರಾಜ್ಯವನ್ನಾಗಿಸುವ ಸಾಂವಿಧಾನಿಕ ತಿದ್ದುಪಡಿಗೆ ಸಹಿ ಹಾಕಿದರು. ಚೌಗ್ಯಾಲರ ಸ್ಥಾನಮಾನವನ್ನು ತೆಗೆದು ಹಾಕಿ ಮೇ 16, 1975ರಂದು ಭಾರತದ 22 ನೇ ರಾಜ್ಯವಾಗಿ ಸಿಕ್ಕಿಂ ಅನ್ನು ಅಧಿಕೃತವಾಗಿ ಸೇರ್ಪಡೆಗೊಳಿಸಲಾಯಿತು.

ಅಂದಿನಿಂದ ಇಂದಿನವರೆಗೂ ಮೇ16 ರಂದು ಸಿಕ್ಕಿಂ ರಾಜ್ಯತ್ವದ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಗೃಹಸಚಿವ ಅಮಿತ್‌ ಶಾ, ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಸೇರಿದಂತೆ ಹಲವು ಗಣ್ಯರು ಸಿಕ್ಕಿಂ ದಿನಾಚರಣೆಗೆ ಶುಭಾಶಯ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!