ಮಂಕಾದ ರಾಹುಲ್ ಪಡೆ: ರಾಜಸ್ಥಾನ ರಾಯಲ್ಸ್‌ಗೆ 155 ರನ್ ಟಾರ್ಗೆಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಖನೌ ಸೂಪರ್ ಜೈಂಟ್ಸ್ ರಾಜಸ್ಥಾನ ರಾಯಲ್ಸ್ ವಿರುದ್ಧ 7 ವಿಕೆಟ್ ನಷ್ಟಕ್ಕೆ 154 ರನ್ ಸಿಡಿಸಿತು.

ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಕೆಎಲ್ ರಾಹುಲ್ ಹಾಗೂ ಕೈಲ್ ಮೇಯರ್ಸ್ ಉತ್ತಮ ಆರಂಭ ನೀಡಿದರು. ಕೆಎಲ್ ರಾಹುಲ್ 32 ಎಸೆತದಲ್ಲಿ 39 ರನ್ ಸಿಡಿಸಿ ಔಟಾದರು. ಇತ್ತ ಕೈಲ್ ಮೇಯರ್ಸ್ ಹೋರಾಟ ಮುಂದುವರಿಸಿ ಹಾಫ್ ಸೆಂಚುರಿ ಸಿಡಿಸಿದರು.

ಇದರ ನಡುವೆ ಆಯುಷ್ ಬದೋನಿ ಹಾಗೂ ದೀಪಕ್ ಹೂಡ ಅಬ್ಬರಿಸಲಿಲ್ಲ. ಇತ್ತ ಕೈಲ್ ಮೇಯರ್ಸ್ 51 ರನ್ ಸಿಡಿಸಿ ನಿರ್ಗಮಿಸಿದರು. ಮಾರ್ಕಸ್ ಸ್ಟೊಯ್ನಿಸ್ ಹಾಗೂ ನಿಕೋಲ್ ಪೂರನ್ ಕೊಂಚ ಹೋರಾಟ ನೀಡಿದರು. ಸ್ಟೊಯ್ನಿಸ್ 16 ಎಸೆತದಲ್ಲಿ 21 ರನ್ ಸಿಡಿಸಿ ಔಟಾದರು. ಪೂರನ್ 20 ಎಸೆತದಲ್ಲಿ 28 ರನ್ ಸಿಡಿಸಿ ಔಟಾದರು.

ಕ್ರುನಾಲ್ ಪಾಂಡ್ಯ ಅಜೇಯ 4 ರನ್ ಸಿಡಿಸಿದರೆ, ಯುಧ್ವೀರ್ ಸಿಂಗ್ 1 ರನ್ ಸಿಡಿಸಿ ಔಟಾದರು. ಈ ಮೂಲಕ ಲಖನೌ ಸೂಪರ್ ಜೈಂಟ್ಸ್ 7 ವಿಕೆಟ್ ನಷ್ಟಕ್ಕೆ 154 ರನ್ ಸಿಡಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!