ಹೋರಾಟಗಾರ ಫೈಜುಲ್ ಹುಸೇನ್ ಗೆ ವಿಷಕಾರಿ ಚುಚ್ಚುಮದ್ದು ನೀಡಿ ಕೊಂದಿತ್ತು ಜಪಾನಿ ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಫೈಜುಲ್ ಹುಸೇನ್ ರಾವಲ್ಪಿಂಡಿ (ಈಗ ಪಾಕಿಸ್ತಾನದಲ್ಲಿದೆ)ಗೆ ಸೇರಿದವರು. ಭಾರತೀಯ ಮಿಲಿಟರಿ ಪೊಲೀಸ್‌ ಪಡೆಯಲ್ಲಿ ಲ್ಯಾನ್ಸ್ ನಾಯಕ್ ಆಗಿದ್ದ ಫೈಜುಲ್‌ ರನ್ನು ಅಂಡಮಾನ್‌ ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಎರಡನೆಯ ಮಹಾಯುದ್ಧದಲ್ಲಿ, ಜಪಾನಿಯರು ಮಾರ್ಚ್ 1942 ರಲ್ಲಿ ಅಂಡಮಾನ್ ನ ದ್ವೀಪಗಳನ್ನು ವಶಪಡಿಸಿಕೊಂಡರು. ಜಪಾನಿನ ಆಕ್ರಮಣದ ಸಂದರ್ಭದಲ್ಲಿ (ಏಪ್ರಿಲ್ 1942) ಫೈಜುಲ್ ಹುಸೇನ್ ಅಂಡಮಾನ್‌ ನ ಇತರ ನಿವಾಸಿಗಳೊಂದಿಗೆ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್‌ಗೆ ಸೇರಿದರು. ಅವರು ಈ ಸಂಘಟನೆಯ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಅವರು ಲೀಗ್‌ನ ಕಾರ್ಯಗಳಲ್ಲಿ ಭಾಗವಹಿಸಲು ಹಳ್ಳಿಗರನ್ನು ಪ್ರೇರೇಪಿಸಿದರು. ಹೋರಾಟದ ಸಂದರ್ಭಗಳಲ್ಲಿ ಅವರು ತಮ್ಮ ಗುಂಪಿನ ಸದಸ್ಯರೊಂದಿಗೆ ಕಾರ್ಯಕ್ರಮಗಳ ಸ್ಥಳಗಳಲ್ಲಿ ಜನರನ್ನು ಒಟ್ಟುಗೂಡಿಸಿದರು.
ಮಿತ್ರ ಪಡೆಗಳಿಂದ ದ್ವೀಪಗಳ ಮೇಲೆ ಬಾಂಬ್ ದಾಳಿ ಪ್ರಾರಂಭವಾದಾಗ, ಜಪಾನಿನ ಪಡೆ ಫೈಜುಲ್ ಹುಸೇನ್ ಅವರನ್ನು ಬ್ರಿಟಿಷ್ ಗೂಢಚಾರಿ ಎಂಬ ತಪ್ಪು ಮಾಹಿತಿಯನ್ನು ಆಧರಿಸಿ ಮೇಲೆ ಬಂಧಿಸಿತು. ಅವರನ್ನು ಸೆಲ್ಯುಲಾರ್ ಜೈಲಿನಲ್ಲಿ ಬಂಧಿಸಿಡಲಾಗಿತ್ತು. ಜೈಲಿನಲ್ಲಿ ಅವರು ಪ್ರತಿದಿನ- ಪ್ರತಿ ಗಂಟೆ ಜಪಾನಿನ ಪಡೆಗಳ ಬರ್ಬರ ಚಿತ್ರಹಿಂಸೆಗೆ ಒಳಗಾಗಬೇಕಾಯಿತು. ಅವರ ಮೇಲಿನ ತಪ್ಪಾದ ಆರೋಪವನ್ನು ಋಜುವಾತುಪಡಿಸುವಲ್ಲಿ ವಿಫಲವಾದ ಜಪಾನ್ ಪಡೆ, 1943ರ ನವೆಂಬರ್ 19ರಂದು ಅವರಿಗೆ ವಿಷಕಾರಿ ಚುಚ್ಚುಮದ್ದನ್ನು ನೀಡಿ ಸೆಲ್ಯುಲಾರ್ ಜೈಲಿನಿಂದ ಬಿಡುಗಡೆ ಮಾಡಿತು. ಅದರ ಪರಿಣಾಮವಾಗಿ, ಅವರು ಜಂಗ್ಲಿಘಾಟ್‌ನಲ್ಲಿದ್ದ ತಮ್ಮ ಮನೆಗೆ ತಲುಪಿದ ಕೆಲವೇ ಗಂಟೆಗಳಲ್ಲಿ ಮೃತಪಟ್ಟರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!