ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೆಸರಲ್ಲಿ ಫೇಕ್ ಅಕೌಂಟ್: ಸಂಸದರಿಗೆ ಬಂತು ಸಂದೇಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಹೆಸರಲ್ಲಿ ಕಿಡಿಗೇಡಿಗಳು ಪ್ರೊಫೈಲ್ ಫೋಟೋದೊಂದಿಗೆ ನಕಲಿ ಖಾತೆಯನ್ನು ರಚಿಸಿದ್ದಾರೆ. ಈ ಮೂಲಕ ಸಂಸದರು ಮತ್ತು ಇತರರಿಗೆ ಕೆಲವು ಸಂಖ್ಯೆಗಳಿಂದ ಸಂದೇಶಗಳನ್ನು ಕಳುಹಿಸಿದ್ದಾರೆ .
ಈ ಕುರಿತು ಮಾಹಿತಿ ನೀಡಿದ ಓಂ ಬಿರ್ಲಾ, ತಮ್ಮ ಹೆಸರಿನ ಖಾತೆಯಿಂದ ಬರುವ ಕರೆಗಳು ಮತ್ತು ಸಂದೇಶಗಳನ್ನು ನಿರ್ಲಕ್ಷಿಸಿ ಮತ್ತು ಅವರ ಕಚೇರಿಗೆ ತಿಳಿಸುವಂತೆ ಅವರು ತಿಳಿಸಿದ್ದಾರೆ.

ಕೆಲವು ಕಿಡಿಗೇಡಿಗಳು ನನ್ನ ಹೆಸರಿನಲ್ಲಿ ಪ್ರೊಫೈಲ್ ಫೋಟೋದೊಂದಿಗೆ ನಕಲಿ ಖಾತೆಯನ್ನು ರಚಿಸಿದ್ದಾರೆ. 7862092008, 9480918183 & 9439073870 ಈ ಸಂಖ್ಯೆಗಳಿಂದ ಸಂದೇಶಗಳನ್ನು ಕಳುಹಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಮಾಡಲಾಗಿದೆ. ದಯವಿಟ್ಟು ಈ ಮತ್ತು ಇತರ ಸಂಖ್ಯೆಗಳಿಂದ ಕರೆಗಳು/ಸಂದೇಶಗಳನ್ನು ನಿರ್ಲಕ್ಷಿಸಿ ಮತ್ತು ನನ್ನ ಕಚೇರಿಗೆ ತಿಳಿಸಿ ಎಂದು ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!