Thursday, July 7, 2022

Latest Posts

ನಕಲಿ ಕೋವಿಡ್ ವರದಿ ನೀಡಿ ದುಬೈಗೆ ಪ್ರಯಾಣಿಸಲು ಯತ್ನ: ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ತಡೆ

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:

ಯುಎಇಗೆ ತೆರಳಲು ಸಜ್ಜಾಗಿದ್ದ 40 ಪ್ರಯಾಣಿಕರು ನಕಲಿ ಕೋವಿಡ್ ವರದಿಯನ್ನು ನೀಡಿದ್ದು, ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿದೆ.
ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷಾ ವರದಿ ಪರಿಶೀಲನೆ ವೇಳೆ ಕ್ಯೂಆರ್ ಕೋಡ್​​ನಲ್ಲಿ ವ್ಯತ್ಯಾಸಗಳು ಕಂಡುಬಂದ ನಂತರ ಪ್ರಮಾಣಪತ್ರಗಳನ್ನು ನಕಲಿ ಎಂದು ಗುರುತಿಸಲಾಗಿದೆ.
ದುಬೈಗೆ ಪ್ರಯಾಣಿಸುವ ಭಾರತೀಯ ಪ್ರಯಾಣಿಕರು ಎರಡು ಆರ್‌ಟಿ-ಪಿಸಿಆರ್ ವರದಿಗಳನ್ನು ಒದಗಿಸಬೇಕು. ಜೊತೆಗೆ ಒಂದು 48 ಗಂಟೆಗಳ ಹಿಂದಿನ ಕೋವಿಡ್ ಪರೀಕ್ಷಾ ಪ್ರಮಾಣ ಪತ್ರ, ಮತ್ತೊಂದು 6 ಗಂಟೆಗಳ ಹಿಂದಿನ ಕೋವಿಡ್ ಪರೀಕ್ಷಾ ವರದಿಯದ್ದು ಆಗಿರಬೇಕು.
ಈ ಕೋವಿಡ್ ಪರೀಕ್ಷಾ ವರದಿಗಳಲ್ಲಿ ಕ್ಯೂರ್ ಆರ್ ಕೋಡ್ ಇರುತ್ತದೆ. ಅವುಗಳನ್ನು ಪರಿಶೀಲನೆ ನಡೆಸಿದ ನಂತರವೇ ಪ್ರಯಾಣಿಕರನ್ನು ವಿಮಾನದೊಳಗೆ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ. ಆದರೆ ದುಬೈಗೆ ತೆರಳಲಿದ್ದ 40 ಮಂದಿ ನಕಲಿ ಕೋವಿಡ್ ಪರೀಕ್ಷಾ ವರದಿ ಇದ್ದ ಕಾರಣದಿಂದ ಕ್ಯೂ ಆರ್​ ಕೋಡ್​ ಪರಿಶೀಲನೆ ಸಾಧ್ಯವಾಗಿರಲಿಲ್ಲ. ಇದರಿಂದ ಆ ಎಲ್ಲಾ ಪ್ರಯಾಣಿಕರಿಗೆ ನಿರ್ಬಂಧ ಹೇರಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss