ನಕಲಿ ವಹಿವಾಟು ಆರೋಪ: ಮೂವರಿಗೆ 15 ಲಕ್ಷ ರೂ. ದಂಡ ವಿಧಿಸಿದ ಸೆಬಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಂಬೆ ಸ್ಟಾಕ್‌ ಎಕ್ಸ್‌ಛೇಂಜ್‌ ನಲ್ಲಿ ನಕಲಿ ವಹಿವಾಟಿನಲ್ಲಿ ತೊಡಗಿದ್ದ ಆರೋಪದ ಮೇಲೆ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿ (ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ) ಮೂವರಿಗೆ ದಂಡ ವಿಧಿಸಿದೆ. ಇಲ್ಲಿಕ್ವಿಡ್‌ ಸ್ಟಾಕ್‌ ಆಪ್ಶನ್‌ ಟ್ರೇಡಿಂಗ್‌ ನಲ್ಲಿ ನಕಲಿ ವಹಿವಾಟು ನಡೆಸಿದ ಆರೋಪದ ಮೇಲೆ ಮೂವರಿಗೆ 15 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಮೂರು ಪ್ರತ್ಯೇಕ ಆದೇಶಗಳಲ್ಲಿ, ರಾಧಾ ದೇವಿ ಗೋಯೆಂಕಾ, ರಾಧೇಯ್ ಶ್ಯಾಮ್ ಮಂಚಂದ ಮತ್ತು ಸಂಚಿತ್ ಅರೋರಾಗೆ ತಲಾ ₹ 5 ಲಕ್ಷ ದಂಡವನ್ನು ವಿಧಿಸಲಾಗಿದೆ. ಮೂವರು ವ್ಯಕ್ತಿಗಳು ರಿವರ್ಸಲ್ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದರು ಎಂದು ಸೆಬಿ ತಿಳಿಸಿದ್ದು ಪಿಎಫ್‌ಯುಟಿಪಿ (ವಂಚನೆಯ ಮತ್ತು ಅನ್ಯಾಯದ ವ್ಯಾಪಾರ ಅಭ್ಯಾಸಗಳ ನಿಷೇಧ) ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದೆ.

ರಿವರ್ಸಲ್ ಟ್ರೇಡ್‌ಗಳನ್ನು ಅಸಹಜ ವ್ಯಾಪಾರವೆಂದು ಗುರುತಿಸಲಾಗಿದ್ದು ಅವುಗಳು ವ್ಯಾಪಾರವನ್ನು ತಪ್ಪುದಾರಿಗೆಳೆಯುತ್ತವೆ ಎನ್ನಲಾಗಿದೆ. ಹಾಗಾಗಿ ಸೆಬಿ ದಂಡ ವಿಧಿಸುವ ಮೂಲಕ ಕ್ರಮ ಕೈಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!