Sunday, April 18, 2021

Latest Posts

ಪುತ್ರನ ಕೊನೆಯಾಸೆ ಈಡೇರಿಸಲು ಮಗನ ಫೋಟೊ ಜೊತೆ ಯುವರತ್ನ ಚಿತ್ರ ನೋಡಿದ ಕುಟುಂಬ

ದಿಗಂತ ವರದಿ ಮೈಸೂರು:

ಆತ ಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಯಾನಿ. ಏ.1 ರಂದು ಬಿಡುಗಡೆಯಾದ ಪುನೀತ್ ರಾಜ್ ಕುಮಾರ್ ಅಭಿನಯದ ಚಿತ್ರವನ್ನು ನೋಡುವ ಕಾತುರದಿಂದಿದ್ದ. ಆತ ಚಿತ್ರ ನೋಡುವ ಮುನ್ನವೇ ಈ ಲೋಕದಿಂದಲೇ ಹೊರಟು ಹೋದ. ಆದರೆ ಪುತ್ರನನ್ನು ಕಳೆದುಕೊಂಡ ದುಃಖದಲ್ಲಿದ್ದ ಕುಟುಂಬದವರು ಮಗನ ಕೊನೆ ಆಸೆಯನ್ನು ಈಡೇರಿಸಿದ್ದಾರೆ.
ಮಗನ ಫೋಟೋ ಜೊತೆ ಯುವರತ್ನ ಸಿನಿಮಾ ನೋಡಿದ್ದಾರೆ.
ಕುವೆಂಪು ನಗರದ ನಿವಸಿ ಮುರಳೀಧರ್ ಅವರ ಪುತ್ರ ಹರಿಕೃಷ್ಣನ್ ಕಳೆದ ನಾಲ್ಕು ತಿಂಗಳ ಹಿಂದೆ ಸ್ನೇಹಿತನ ಜೊತೆ ವರುಣಾ ನಾಲೆಗೆ ಈಜಲು ಹೋಗಿ ಸಾವಿಗೀಡಾಗಿದ್ದ.
ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಯಾಗಿದ್ದ ಹರಿಕೃಷ್ಣನ್ ಯುವರತ್ನ ಸಿನಿಮಾ ನೋಡಲೇ ಬೇಕೆಂಬ ಆಸೆ ಇಟ್ಟುಕೊಂಡಿದ್ದ. ಹಾಗಾಗಿ ಮುರಳೀಧರ್ ಅವರು ಕುಟುಂಬ ಸಮೇತರಾಗಿ ಮಗನ ಫೋಟೊ ಇಟ್ಟುಕೊಂಡು ಯುವರತ್ನ ಸಿನಿಮಾ ನೋಡಿದ್ದಾರೆ.
ಮೈಸೂರಿನ ಡಿಆರ್ ಸಿ ಮಲ್ಟಿಪ್ಲೆಕ್ಸ್ ನಲ್ಲಿ ತಂದೆ, ತಾಯಿ, ಯುವಕನ ಅಣ್ಣ ಸಿನಿಮಾ ವೀಕ್ಷಿಸಿದರು. ಸಾವನ್ನಪ್ಪಿದ ಮಗನಿಗೂ ಒಂದು ಟಿಕೆಟ್ ತೆಗೆದುಕೊಂಡು, ಆ ಸೀಟ್ ನಲ್ಲಿ ಮಗನ ಫೋಟೋ ಇಟ್ಟುಕೊಂಡು ಚಿತ್ರ ನೋಡಿದರು.
ನನ್ನ ಮಗ ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಅಭಿಮಾನಿ. ಇಂದು ಸಿನಿಮಾ ನೋಡಲು ಅವನೊಬ್ಬನನ್ನೇ ಮನೆಯಲ್ಲಿ ಬಿಟ್ಟು ಬರಲು ಇಷ್ಟ ಇರಲಿಲ್ಲ ಹಾಗಾಗಿ ಅವನಿಗೂ ಒಂದು ಟಿಕೆಟ್ ತೆಗೆದುಕೊಂಡು ಕರೆತಂದಿದ್ದೇವೆ ಎಂದು ಕುಟುಂಬದವರು ಕಣ್ಣೀರಿಟ್ಟರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss