ಬಿರಿಯಾನಿಗಾಗಿ ಮದುವೆ ಮುಂದೂಡಿಕೆ: ಪಾರ್ಸೆಲ್‌ ತೆರೆದವರಿಗೆ ಕಾದಿತ್ತು ಶಾಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ‌

ಬಂಧು-ಬಾಂಧವರಿಂದ ಕೂಡಿ ನಡೆಯುತ್ತಿದ್ದ ಮದುವೆ ಸಂಭ್ರಮ ಒಮ್ಮೆಲೆ ನಿಂತಿದೆ. ಮದುವೆಗೆ ಬಂದಿದ್ದ ಎಲ್ಲಾ ಅತಿಥಿಗಳಿಗೂ ಬಿರಿಯಾನಿ ಊಟ ಸಿಗಲಿಲ್ಲ ಎಂಬ ಕಾರಣಕ್ಕೆ ಮದುವೆಯೇ ಮುಂದೂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಮೊದಲೇ ನಿಶ್ಚಯ ಮಾಡಿದಂತೆ ಮಂಗಳವಾರ ಮದುವೆ ನೆರವೇರಬೇಕಿತ್ತು. ಮದುವೆ ಬರುವವರಿಗೆ ರುಚಿಯಾದ ಬಿರಿಯಾನಿ ಖಾದ್ಯ ಬಡಿಸಲು ವಧು-ವರರ ಕುಟುಂಬಸ್ಥರು ನಿಶ್ಚಯಿಸಿ, ಸೇಲಂ ಆರ್‌ಆರ್ ಬಿರಿಯಾನಿ ರೆಸ್ಟೋರೆಂಟ್‌ಗೆ ಆರ್ಡರ್‌ ಕೊಟ್ಟಿದ್ದರು. ಜೊಮಾಟೊ ಮೂಲಕ ಬೆಂಗಳೂರಿನಿಂದ 3,500ಕೆಜಿ ಮಾಂಸವನ್ನು ಪಾರ್ಸಲ್‌ ತರಿಸಿಕೊಂಡ ರೆಸ್ಟೋರೆಂಟ್‌ ಅದನ್ನು ನಿರ್ವಾಹಕರಿಗೆ ತಲುಪಿಸಿದೆ. ಬಿರಿಯಾನಿ ತಯಾರಿಸಲು ಮಟನ್ ಮತ್ತು ಚಿಕನ್ ಪಾರ್ಸೆಲ್‌ ತೆರೆದವರಿಗೆ ಶಾಕ್‌ ಕಾದಿತ್ತು. ತಂದಿದ್ದ ಅಷ್ಟೂ ಮಾಂಸ ಕೊಳೆತು, ಗಬ್ಬು ನಾರುತ್ತಿತ್ತು.

ಕೂಡಲೇ ಈ ವಿಚಾರವನ್ನು ವಧುವಿನ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ವಧು ಕುಟುಂಬಸ್ಥರು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ತಪಾಸಣೆ ನಡೆಸಿದ ಅಧಿಕಾರಿಗಳು ಕೊಳೆತ ಮಾಂಸ ಎಂದು ತೀರ್ಮಾನಿಸಿ ಬಳಿಕ ಸೇಲಂ ಆರ್‌ಆರ್ ಬಿರಿಯಾನಿ ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಜೊಮಾಟೊಗೆ ನೋಟಿಸ್ ಜಾರಿ ಮಾಡಿದೆ. ಮದುವೆಗೆ ಬಂದಿದ್ದ ಸಂಬಂಧಿಕರು ಮತ್ತು ಸ್ನೇಹಿತರಿಗೆ ಬಿರಿಯಾನಿ ನೀಡಲು ಸಾಧ್ಯವಾಗದ ಕಾರಣ ಮದುವೆಯನ್ನೇ ಮುಂದೂಡಿದ್ದಾರೆ. ಇದಕ್ಕೆಲ್ಲಾ ಜೊಮಾಟೊ ಪ್ರಮುಖ ಕಾರಣ ಎಂದು ಆರೋಪ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!