Wednesday, August 17, 2022

Latest Posts

ಖ್ಯಾತ ಮಲಯಾಳಂ ಕವಿ ವಿಷ್ಣುನಾರಾಯಾಣ್ ನಂಬೂದರಿ ನಿಧನ: ಪ್ರಧಾನಿ ಮೋದಿ ಸಂತಾಪ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಮಲಯಾಳಂನ ಪ್ರಸಿದ್ಧ ಕವಿ ವಿಷ್ಣುನಾರಾಯಣ್ ನಂಬೂದರಿ ಅವರು ನಿಧನರಾಗಿದ್ದಾರೆ.
ತಿರುವನಂತಪುರದಲ್ಲಿ ವಿಷ್ಣುನಾರಾಯಣ್(81) ಅವರು ವಿಧಿವಶರಾಗಿದ್ದಾರೆ.
ಸಮಕಾಲೀನ ಮಲಯಾಳಂ ಸಾಹಿತ್ಯ ಜಗತ್ತಿನಲ್ಲಿ ಮೆಚ್ಚುಗೆ ಪಡೆದ ಕವಿಗಳಲ್ಲಿ ನಂಬೂದರಿ ಅವರು ಕೂಡ ಒಬ್ಬರು. ನಂಬೂದರಿ ಅವರು ಪದ್ಮಶ್ರೀ ಪ್ರಶಸ್ತಿ, ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳಿಗೆ ಭಾಜನರಾಗಿದ್ದಾರೆ.
ಈ ಕುರಿತು ಪ್ರಧಾನಿ ಮೋದಿ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ವಿಷ್ಣುನಾರಾಯಣ್ ನಂಬೂದರಿ ಅವರ ನಿಧನದಿಂದ ಮನಸ್ಸಿಗೆ ನೋವಾಗಿದೆ. ಸಂಸ್ಕೃತಿ ಮತ್ತು ಸಾಹಿತ್ಯಿಕ ಜಗತ್ತಿಗೆ ಅವರು ನೀಡಿರುವ ಕೊಡುಗೆ ಮಹತ್ವದ್ದು. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!