ಹೊಸದಿಗಂತ ವರದಿ ಅಂಕೋಲಾ :
ಸಂಗಾತಿ ರಂಗಭೂಮಿ ಅಂಕೋಲಾ ಇವರ ಆಶ್ರಯದಲ್ಲಿ ನಡೆದ ಅಂಕೋಲಾ ಉತ್ಸವದಲ್ಲಿ ವಿಜಯಗಾನೋತ್ಸವ ಕಾರ್ಯಕ್ರಮ ನೀಡಲು ಬಂದಿದ್ದ ಕನ್ನಡ ಚಿತ್ರರಂಗದ ಖ್ಯಾತ ಗಾಯಕ ವಿಜಯಪ್ರಕಾಶ್ ಅವರು ಅಂಬಾರಕೊಡ್ಲದ ವಿಷ್ಣು ಆರ್ಟ್ಸ್ ಕೈಚಳಕದಲ್ಲಿ ರಂಗೋಲಿಯಲ್ಲಿ ಮೂಡಿ ಬಂದ ತಮ್ಮ ಚಿತ್ರ ಕಂಡು ಅಚ್ಚರಿಗೊಂಡರು.
ವೇದಿಕೆಯ ಮೇಲೆ ಕುಳಿತು ತಮ್ಮ ರಂಗೋಲಿ ಚಿತ್ರವನ್ನು ಬೆರಗುಗಣ್ಣಿನಿಂದ ನೋಡಿದ ವಿಜಯಪ್ರಕಾಶ್ ತಮ್ಮ ಮೊಬೈಲ್ ಪೋನ್ ಮೂಲಕ ರಂಗೋಲಿ ಚಿತ್ರವನ್ನು ಸೆರೆಹಿಡಿದು ಕಲಾವಿದರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಡಾ.ರಾಜಕುಮಾರ್ ಅಭಿಮಾನಿ ಬಳಗದವರು ವಿಜಯಪ್ರಕಾಶ ಅವರ ಪೆನ್ಸಿಲ್ ಆರ್ಟ್ ಅವರಿಗೆ ಕೊಡುಗೆಯಾಗಿ ನೀಡಿದರು.