ಖ್ಯಾತ ಕಿರುತೆರೆ ನಟ ನಿತಿನ್ ಚೌಹಾಣ್ ಹಠಾತ್ ಸಾವು: ಘಟನೆ ಸುತ್ತ ಸಂಶಯದ ಹುತ್ತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಖ್ಯಾತ ಕಿರುತೆರೆ ನಟ ನಿತಿನ್ ಚೌಹಾಣ್ ಗುರುವಾರ ಮುಂಬೈನಲ್ಲಿ ನಿಧನರಾಗಿದ್ದಾರೆ. ನಟ ನಿತಿನ್ ಅವರಿಗೆ ಕೇವಲ 35 ವರ್ಷ ವಯಸ್ಸಾಗಿತ್ತು. ನಿತಿನ್ ಅನೇಕ ಟಿವಿ ಶೋಗಳಲ್ಲಿ ಅದ್ಭುತವಾಗಿ ನಟಿಸಿದ್ದರು. ಅವರ ಹಠಾತ್ ನಿಧನದಿಂದ ಅಭಿಮಾನಿಗಳೆಲ್ಲರೂ ದುಃಖಿತರಾಗಿದ್ದಾರೆ.

ಕಾರಣಾಂತರಗಳಿಂದ ಅವರು ಜೀವ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಅವರ ಸಾವಿನ ಬಗ್ಗೆ ಹಲವು ಅನುಮಾನಗಳು ಶುರುವಾಗಿವೆ. ನಿತಿನ್‌ಗೆ ಯಾವ ಸಮಸ್ಯೆ ಇರಲಿಲ್ಲ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವಂಥ ವ್ಯಕ್ತಿ ಅವರಲ್ಲ ಎಂದು ಆಪ್ತರು ಹೇಳುತ್ತಿದ್ದು, ಇನ್ನಷ್ಟು ಅನುಮಾನ ಹೆಚ್ಚಾಗಿದೆ.

‘ಜಿಂದಗಿ ಡಾಟ್ ಕಾಮ್’, ‘ಕ್ರೈಮ್ ಪೆಟ್ರೋಲ್’ ಮತ್ತು ‘ಫ್ರೆಂಡ್ಸ್’ ನಂತಹ ಟಿವಿ ಶೋಗಳಲ್ಲಿ ನಿತಿನ್ ಕೆಲಸ ಮಾಡಿದ್ದರು. ‘ಕ್ರೈಮ್ ಪೆಟ್ರೋಲ್’ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಸಾವಿನ ಸುದ್ದಿ ತಿಳಿದ ನಂತರ ಅವರ ತಂದೆ ಮುಂಬೈ ತಲುಪಿದ್ದಾರೆ. ಮೃತದೇಹವನ್ನು ಅಲಿಗಢಕ್ಕೆ ಕೊಂಡೊಯ್ಯಲಿದ್ದಾರೆ. ಈ ಬಗ್ಗೆ ಪೊಲೀಸರಿಂದ ಯಾವುದೇ ಹೇಳಿಕೆ ಹೊರಬಿದ್ದಿಲ್ಲ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!