Tuesday, June 28, 2022

Latest Posts

ರಿಯಲ್ ಹೀರೋ ಸೋನು ಸೂದ್ ಮೀಟ್ ಮಾಡಲು 700 ಕಿ.ಮೀ. ನಡೆದ ಅಭಿಮಾನಿ.. ಸೋನು ರಿಯಾಕ್ಷನ್ ಹೀಗಿತ್ತು!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೊರೋನಾ ಸಮಯದಲ್ಲಿ ಬಡವರಿಗೆ ಸಹಾಯ ಮಾಡಿದ ರಿಯಲ್ ಹೀರೋ ಸೋನು ಸೂದ್‌ಗೆ ಸಿಕ್ಕಾಪಟ್ಟೆ ಫಾಲೋವರ‍್ಸ್.
ಏನೇನೋ ಮಾಡಿ ತಮ್ಮ ನೆಚ್ಚಿನ ತಾರೆಯರ ಅಟೆಂಶನ್ ಪಡೆಯಲು ಅಭಿಮಾನಿಗಳು ಇಷ್ಟಪಡುತ್ತಾರೆ. ಆದರೆ ಇಲ್ಲೊಬ್ಬ ಅಭಿಮಾನಿ ಸೋನು ಸೂದ್‌ರನ್ನು ಭೇಟಿ ಮಾಡಲು 700 ಕಿ.ಮೀ ಪಾದಯಾತ್ರೆ ಮಾಡಿದ್ದಾರೆ.
ಹೈದರಾಬಾದ್‌ನ ವೆಂಕಟೇಶ್ ಸೋನುರನ್ನು ಮೀಟ್ ಮಾಡಲು ಮುಂಬೈಗೆ ಬರಿಕಾಲಿನಲ್ಲಿ ನಡೆದುಕೊಂಡು ಬಂದಿದ್ದಾರೆ. ಈ ಅಭಿಮಾನವನ್ನು ಕಂಡು ಸೋನು ಮನಸ್ಸು ತುಂಬಿಬಂದಿದೆ. ಆದರೆ ತನ್ನನ್ನು ನೋಡಲು ಈ ರಿಸ್ಕ್ ತೆಗೆದುಕೊಂಡಿದ್ದಕ್ಕೆ ಬೇಸರವೂ ಆಗಿದೆ. ಈ ಬಗ್ಗೆ ಸೋನು ಈ ರೀತಿ ಟ್ವೀಟ್ ಮಾಡಿದ್ದಾರೆ.


‘ನನ್ನನ್ನು ಭೇಟಿಯಾಗಲು ವೆಂಕಟೇಶ್ ಹೈದರಾಬಾದ್‌ನಿಂದ ಬಂದಿದ್ದಾರೆ. ವಾಹನ ವ್ಯವಸ್ಥೆ ಮಾಡುತ್ತೇನೆ ಎಂದರೂ ಅದನ್ನು ಅವರು ಒಪ್ಪಲಿಲ್ಲ. ಈ ಅಭಿಮಾನ ಸ್ಫೂರ್ತಿದಾಯಕವಾಗಿದೆ. ಆದರೆ ಈ ರೀತಿ ಕಷ್ಟಪಟ್ಟು ನನ್ನನ್ನು ಮೀಟ್ ಮಾಡುವುದಕ್ಕೆ ನಾನು ಪ್ರೇರಣೆ ನೀಡೋದಿಲ್ಲ’ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss