ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಕರ್ನಾಟಕ ರಾಜ್ಯ ಫಿಜಿಕಲಿ ಚಾಲೆಂಜ್ಡ್ ಕ್ರಿಕೆಟ್ ಅಸೋಸಿಯೇಶನ್ ವತಿಯಿಂದ ಆಯೋಜಿಸುತ್ತಿರುವ ವಿಶೇಷ ಚೇತನರ ಕ್ರಿಕೆಟ್ ಟೂರ್ನಿಗೆ ನಟಿ ರಾಗಿಣಿ ದ್ವಿವೇದಿ ರಾಯಭಾರಿಯಾಗಿದ್ದಾರೆ.
ಮಾರ್ಚ್ 11ರಿಂದ ನೋಯ್ಡಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯಾವಳಿಗಳು ನಡೆಯಲಿದ್ದು, ಒಟ್ಟು ಟೂರ್ನಿಯಲ್ಲಿ 28 ತಂಡಗಳು ಭಾಗವಹಿಸಲಿವೆ. ದೇಶದಲ್ಲೇ ಮೊದಲ ಬಾರಿಗೆ ವಿಶೇಷ ಚೇತನರ ಟಿ-10 ಪಂದ್ಯಾವಳಿ ನಡೆಯುತ್ತಿದೆ.
ಈ ಕುರಿತು ಮಾತನಾಡಿರುವ ರಾಗಿಣಿ, ವಿಶೇಷ ಚೇತನರ ಕ್ರಿಕೆಟ್ ತಂಡಕ್ಕೆ ರಾಯಭಾರಿ ಆಗಿರೋದು ಖುಷಿ ಕೊಟ್ಟಿದೆ. ಯಾವಾಗಲೂ ನಾನು ಅವರ ಜೊತೆ ಇರುತ್ತೇನೆ. ಬಿಗ್ ಬಾಸ್ ಗೆ ನಾನು ಹೋಗಲ್ಲ. ಡ್ರಗ್ಸ್ ಕೇಸ್ ವಿಚಾರವಾಗಿ ನಾನು ಕಮೆಂಟ್ ಮಾಡಲ್ಲ ಎಂದರು.
ನನಗೆ ಅಭಿಮಾನಿಗಳಿಂದ ಪ್ರೀತಿ ಬಿಟ್ಟು ಏನು ಸಿಕ್ಕಿಲ್ಲ. ಅಭಿಮಾನಿಗಳು ಯಾವಾಗಲೂ ನನ್ನ ಜೊತೆ ಇರ್ತಾರೆ. ನಾನು ಏನು ಅನ್ನೋದನ್ನ ನಮ್ಮ ಜನರಿಗೆ ಗೊತ್ತಿದೆ. ಸಮಯ ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂದರು.