spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಮಂತಾ-ನಾಗಚೈತನ್ಯ ಡೈವೋರ್ಸ್ ಖಚಿತ ಎನ್ನುತ್ತಿದ್ದಾರೆ ಫ್ಯಾನ್ಸ್​… ಯಾಕೆ ಗೊತ್ತಾ?

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಟಾಲಿವುಡ್ ನಟಿ ಸಮಂತಾ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದು, ಅವರ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದರೂ ಆ ಬಗ್ಗೆ ಅವರು ಮೌನ ವಹಿಸಿದ್ದಾರೆ. ಇತ್ತ ನಾಗ ಚೈತನ್ಯ ಜತೆ ಸಮಂತಾ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ವದಂತಿ ಅಭಿಮಾನಿಗಳಿಗೆ ಶಾಕ್​ ನೀಡಿದೆ. ಆದರೆ ಎಲ್ಲಿಯೂ ಈ ಬಗ್ಗೆ ಉತ್ತರ ನೀಡುವ ಗೋಜಿಗೆ ಸಮಂತಾ ಹೋಗಿಲ್ಲ. ಇದು ವದಂತಿ ಎಂದು ಕೆಲವರು ವಾದಿಸುತ್ತಾ ಬರುತ್ತಿದ್ದರೂ ಇದು ಪದೇಪದೇ ಸುಳ್ಳಾಗುತ್ತಿದೆ. ಸಮಂತಾ-ನಾಗ ಚೈತನ್ಯ ವಿಚ್ಛೇದನ ಪಡೆಯಲಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯ ಒದಗಿಸುವ ಸಾಕಷ್ಟು ವಿಷಯಗಳು ಸಿಗುತ್ತಿವೆ. ಇದೀಗ ಇದಕ್ಕೆ ಹೊಸದೊಂದು ಸೇರ್ಪಡೆ ಆಗಿದೆ.
ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ನಟನೆಯ ‘ಲವ್​ ಸ್ಟೋರಿ’ ಸಿನಿಮಾ ಟ್ರೇಲರ್​ ಇಂದು ರಿಲೀಸ್​ ಆಗಿದೆ. ಇದಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅನೇಕ ಸೆಲೆಬ್ರಿಟಿಗಳು ಈ ಟ್ರೇಲರ್ ಪೋಸ್ಟ್​ ಮಾಡಿ, ಅದನ್ನು ವೀಕ್ಷಿಸುವಂತೆ ಅಭಿಮಾನಿಗಳ ಬಳಿ ಕೋರುತ್ತಿದ್ದಾರೆ. ಸಮಂತಾ ಕೂಡ ಈ ಬಗ್ಗೆ ಪೋಸ್ಟ್ ಮಾಡುತ್ತಾರೆ, ಈ ಮೂಲಕ ಎಲ್ಲಾ ವದಂತಿಗೆ ತೆರೆ ಎಳೆಯುತ್ತಾರೆ ಎಂದು ಅಭಿಮಾನಿಗಳು ಕಾದು ಕೂತಿದ್ದರು. ಆದರೆ, ಈ ನಿರೀಕ್ಷೆ ಸುಳ್ಳಾಗಿದೆ.
ಸಮಂತಾ ಇನ್​ಸ್ಟಾಗ್ರಾಮ್​ನಲ್ಲಿ ನಾನಾ ರೀತಿಯ ಸ್ಟೇಟಸ್​ಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಆದರೆ, ಅವರು ಎಲ್ಲಿಯೂ ‘ಲವ್​ ಸ್ಟೋರಿ’ ಬಗ್ಗೆ ಉಲ್ಲೇಖ ಮಾಡಿ ಪೋಸ್ಟ್ ಮಾಡಿಲ್ಲ. ಇದು ಸಾಕಷ್ಟು ಅಚ್ಚರಿ ಮೂಡಿಸಿದೆ. ಅಲ್ಲದೆ, ಇದು ವಿಚ್ಛೇದನ ವದಂತಿಗೆ ಸಾಕ್ಷ್ಯ ಒದಗಿಸಿದಂತಾಗಿದೆ. ಈ ವಿಚಾರವನ್ನು ಅವರ ಅಭಿಮಾನಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ. ‘ಗಂಡ ಎಂದ ಮಾತ್ರಕ್ಕೆ ಈ ಬಗ್ಗೆ ಪೋಸ್ಟ್​ ಮಾಡಲೇಬೇಕೆಂದೇನೂ ಇಲ್ಲ ಎಂದು ಸಮಂತಾ ಪರ ಕೆಲವರು ವಕಾಲತ್ತು ವಹಿಸಿಕೊಂಡು’ ಬಂದಿದ್ದಾರೆ. ಇನ್ನೂ ಕೆಲವರು, ‘ಸಮಂತಾ-ನಾಗಚೈತನ್ಯ ವಿಚ್ಛೇದನ ಖಚಿತ’ ಎನ್ನುತ್ತಿದ್ದಾರೆ.
ಇತ್ತೀಚೆಗೆ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಸಮಂತಾ ಅವರು ಅಕ್ಕಿನೇನಿ ಸರ್​​ನೇಮ್​ಅನ್ನು ತೆಗೆದು ಹಾಕಿದ್ದರು. ಇದಾದ ನಂತರದಲ್ಲಿ ಅವರ ಸಂಸಾರದ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ನಾಗಾರ್ಜುನ ಇಡೀ ಕುಟುಂಬದ ಜತೆ ಇತ್ತೀಚೆಗೆ ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್​ಮೀಡಿಯಾದಲ್ಲಿ ವೈರಲ್​ ಆಗಿತ್ತು. ಆದರೆ, ಇಲ್ಲಿ ಸಮಂತಾ ಕಾಣಿಸಿರಲಿಲ್ಲ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss