ಗುಜರಾತ್​ ನಾಯಕನ ಅದ್ಭುತ ಆಟಕ್ಕೆ ಶಿಳ್ಳೆ ಹೊಡೆದ ಫ್ಯಾನ್ಸ್​: ಪಂಜಾಬ್ ಗೆ 199 ರನ್ ಟಾರ್ಗೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್​​ ತನ್ನ ತವರಿನಲ್ಲಿ ಭರ್ಜರಿ ಓಪನಿಂಗ್​ ಮಾಡಿದೆ. ಪಂಜಾಬ್​ ವಿರುದ್ಧ ಭರ್ಜರಿ ಬ್ಯಾಟಿಂಗ್​ ಮಾಡುವ ಮೂಲಕ 199 ರನ್​​ಗಳ ಟಾರ್ಗೆಟ್ ನೀಡಿದ್ದಾರೆ.

ಆರಂಭಿಕರಾಗಿ ಮೈದಾನಕ್ಕಿಳಿದ ಶುಭ್ಮನ್​ ಗಿಲ್ ಗಮನಾರ್ಹ ಪ್ರದರ್ಶನ ನೀಡಿದರು. ಅವರು 48 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 89 ರನ್ ಗಳಿಸಿದರು.

ಅತ್ತ ಸಾಯಿ ಸುದರ್ಶನ್​ ಕೂಡ 19 ಎಸತಕ್ಕೆ 6 ಬೌಂಡರಿ ಹೊಡೆಯುವ ಮೂಲಕ 33 ರನ್​ ಬಾರಿಸಿದ್ದಾರೆ. ಆದರೆ ಹರ್ಷದ್​ ಪಟೇಲ್​ ಎಸೆತಕ್ಕೆ ಜಿತೇಶ್​ ಶರ್ಮಾಗೆ ಕ್ಯಾಚ್ ನೀಡಿ ಔಟ್​ ಆದರು. ಇನ್ನು ಕೇನ್​ ವಿಲಿಯಂಸನ್​ 22 ಎಸೆತಕ್ಕೆ 26 ರನ್​ ಬಾರಿಸಿ ಹರ್ಪ್ರೀತ್​ಗೆ ಎಸೆತಕ್ಕೆ ಕ್ಯಾಚ್​ ನೀಡಿ ಔಟ್​ ಆದರು.

ಒಟ್ಟಾರೆಯಾಗಿ ಇವತ್ತಿನ ಮ್ಯಾಚ್ ಯಾರು ಗೆಲ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!