Thursday, July 7, 2022

Latest Posts

ಬಿಪಿನ್ ರಾವತ್ ಗೆ ಸೇನಾ ಗೌರವಗಳೊಂದಿಗೆ ವಿದಾಯ

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:‌

ದೆಹಲಿಯಲ್ಲಿ ಕಂಟೋನ್ಮೆಂಟ್‌ ಪ್ರದೇಶದಲ್ಲಿರುವ ಬ್ರಾರ್‌ ಸ್ಕ್ವೇರ್‌ನಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ ಇಂದು ನಡೆಯಿತು. ಇದೇ ವೇಳೆ ಅವರ ಪತ್ನಿ ಮಧುಲಿಕಾ ರಾವತ್ ಅಂತ್ಯಕ್ರಿಯೆ ಕೂಡ ನೇರವೇರಿತು.
ರಾವತ್‌ ಅಂತ್ಯಕ್ರಿಯೆ ವೇಳೆ 800 ಸೇನಾಧಿಕಾರಿಗಳು ಭಾಗಿಯಾಗಿದ್ದು, 17 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ನಮನ ಸಲ್ಲಿಸಿದರು. ಮೂರು ಸೇನಾ ಪಡೆಗಳ ಸದಸ್ಯರಿಂದ ವಾದ್ಯವೃಂದ ಮೊಳಗಿಸಲಾಯಿತು.
ರಾವತ್‌ ಆವರಿಗೆ ಕೊನೆಯದಾಗಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಭೂಸೇನೆ, ವಾಯುಪಡೆ, ನೌಕಪಡೆ ಅಧಿಕಾರಿಗಳು, ಅಂತಿಮವಾಗಿ ಕುಟುಂಬಸ್ಥರಿಂದ ರಾವತ್‌ ದಂಪತಿಗೆ ನಮನ ಸಲ್ಲಿಸಿದರು.
ಅವರ ಪುತ್ರಿಯರಾದ ಕೃತಿಕಾ ಮತ್ತು ತಾರಿಣಿ ಅವರ ಅಂತಿಮ ವಿಧಿಗಳನ್ನು ನೆರವೇರಿಸಿದರು. ಅಂತ್ಯಸಂಸ್ಕಾರ ವಿಧಿವಿಧಾನ‌ ಮುಕ್ತಾಯದ ಬಳಿಕ ರಾವತ್‌ ಪುತ್ರಿಯರಿಗೆ ತ್ರಿವರ್ಣ ಧ್ವಜ ಹಸ್ತಾಂತರಿಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss