spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಆಸ್ಕರ್ ಫೆರ್ನಾಂಡಿಸ್ ಅವರಿಗೆ ಸಕಲ ಸರಕಾರಿ ಗೌರವಗಳೊಂದಿಗೆ ವಿದಾಯ: ಸಚಿವ ಕೋಟ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ವರದಿ,ಉಡುಪಿ:

ಕೇಂದ್ರ ಮಾಜಿ ಸಚಿವ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರನ್ನು ಸಕಲ ಸರಕಾರಿ ಗೌರವಗಳೊಂದಿಗೆ ವಿದಾಯ ಹೇಳಲಾಗುವುದು, ಅವರ ಧರ್ಮದ ಪ್ರಕಾರ ಅವರ ಅಂತಿಮ ವಿಧಿವಿಧಾನಗಳು ನೆರವೇರಲಿದೆ. ಅವರಿಗೆ ಸದನದಲ್ಲಿ ವಿಶೇಷ ಗೌರವ ನೀಡಲು ಸಭಾಪತಿಗಳು ಸೂಚಿಸಿದ್ದಾರೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವರು ಮಂಗಳವಾರ ರಾಜ್ಯ ಸರಕಾರದ ಪರವಾಗಿ ಉಡುಪಿ ಶೋಕಮಾತಾ ಇಗರ್ಜಿಗೆ ಆಗಮಿಸಿ ಆಸ್ಕರ್ ಅವರ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ಕರ್ ಫೆರ್ನಾಂಡಿಸ್ ಅವರು ಪಕ್ಷಾತೀತವಾಗಿ ಗೌರವ ಗಳಿಸಿದವರು, ಉಡುಪಿಯಂತಹ ಸಣ್ಣ ಊರಿನಿಂದ ರಾಜಕೀಯ ಆರಂಭಿಸಿ ದಿಲ್ಲಿಯಲ್ಲಿ ಪ್ರಭಾವ ಮೆರೆದವರು. ಪಕ್ಷಬೇಧ ಮರೆತು ಅವರಿಗೆ ದಿವಂಗತ ಕೇಂದ್ರ ಸಚಿವ ಟಿ.ಎ.ಪೈ, ಬಿಜೆಪಿ ನಾಯಕರಾಗಿದ್ದ ಡಾ.ವಿ.ಎಸ್.ಆಚಾರ್ಯ ಮೊದಲಾದ ಹಿರಿಯರ ಜೊತೆ ಅವರಿಗೆ ಒಡನಾಟವಿತ್ತು ಎಂದು ನೆನಪಿಸಿಕೊಂಡರು.
ಸರ್ವವನ್ನೂ ಪ್ರೀತಿಸುವ ಗೌರವಿಸುವ ಅಭಿಮಾನಕ್ಕೆ ಮಣಿಯುವ ಗುಣ ಆಸ್ಕರ್ ಫೆರ್ನಾಂಡಿಸ್ ಅವರದ್ದು. ರಾಜಕೀಯವಾಗಿ, ವೈಚಾರಿಕವಾಗಿ ಬೇರೆ ಬೇರೆ ಅಭಿಪ್ರಾಯಗಳನ್ನು ಹೊಂದಿದ್ದರೂ ವೈಯಕ್ತಿಕ ಗೌರವ, ವಿಶ್ವಾಸ, ಪ್ರೀತಿ ಇತ್ತು. ಆಸ್ಕರ್ ಹಾಗೂ ಡಾ. ಆಚಾರ್ಯ ಕರಾವಳಿ ನೆಲದ ಆಸ್ತಿಯಾಗಿದ್ದರು. ಹಿರಿಯ ತಲೆಮಾರಿನ ನಾಯಕರ ನಿರ್ಗಮನ ಪಕ್ಷಗಳಿಗೆ ಹಾಗೂ ಇಡೀ ರಾಜಕೀಯ ವ್ಯವಸ್ಥೆಗೆ ನೋವುಂಟು ಮಾಡಿದೆ ಎಂದು ಸಚಿವ ಕೋಟ ಹೇಳಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss