Monday, August 8, 2022

Latest Posts

ರೈತರ ಕೃಷಿ ಉತ್ಪನ್ನಗಳ ಮಾರಾಟಕ್ಕೆ ನೆರವಾಗುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………….

ಹೊಸ ದಿಗಂತ ವರದಿ, ಚಿತ್ರದುರ್ಗ:

ಕೊರೋನಾ ಲಾಕ್‌ಡೌನ್ ಸಂದರ್ಭ ರೈತರು ತಮ್ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಆಗುತ್ತಿಲ್ಲ. ಹಾಗಾಗಿ ಅಂತಹ ರೈತರಿಗೆ ರಿಯಲ್ ಸ್ಟಾರ್ ಉಪೇಂದ್ರ ಸಹಾಯ ಹಸ್ತ ಚಾಚಿದ್ದಾರೆ. ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪಟ್ರೇಹಳ್ಳಿ ಗ್ರಾಮದ ಮಹೇಶ್ ಎಂಬ ರೈತ ಬೆಳೆದಿದ್ದ 60 ಚೀಲ ಈರುಳ್ಳಿ ಖರೀದಿಸಿದ್ದಾರೆ.
ಲಾಕ್‌ಡೌನ್ ಸಮಯದಲ್ಲಿ ಜನರ ಸಹಾಯಕ್ಕೆ ನಿಂತಿರುವ ನಟ ಉಪೇಂದ್ರ, ರೈತರಿಂದ ನೇರವಾಗಿ ಬೆಳೆ ಖರೀದಿಸಿ ಅದನ್ನು ಅಗತ್ಯವಿರುವ ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಬೆಳೆ ಬೆಳೆದು ಮಾರಲು ಆಗದೆ ಕಷ್ಟದಲ್ಲಿರುವ ರೈತರಿಗೂ ಆ ಮೂಲಕ ನೆರವಾಗುತ್ತಿದ್ದಾರೆ.
ರೈತರ ಬೆಳೆದ ಬೆಳೆಯನ್ನು ತಮಗೆ ಹೇಗೆ ಮಾರಬೇಕು ಎಂಬ ಬಗ್ಗೆ ಉಪೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ವಿವರವಾದ ಮಾಹಿತಿ ಹಂಚಿಕೊಂಡಿದ್ದಾರೆ. ಅದರಂತೆ ಈಗಾಗಲೇ ಹಲವು ಜಿಲ್ಲೆಗಳ ರೈತರು ತಮ್ಮ ಬೆಳೆಯನ್ನು ಉಪೇಂದ್ರ ಅವರಿಗೆ ಮಾರಾಟ ಮಾಡಿದ್ದಾರೆ.
ಉಪೇಂದ್ರ ಪ್ರಕಟಿಸಿದ್ದ ಮಾಹಿತಿ ಗಮನಿಸಿದ ಹಿರಿಯೂರು ತಾಲ್ಲೂಕು ಪಟ್ರೇನಹಳ್ಳಿ ಗ್ರಾಮದ ರೈತ ಮಹೇಶ್, ಉಪೇಂದ್ರ ಅವರಿಗೆ ಕರೆ ಮಾಡಿ ಮಾಹಿತಿ ಪಡೆದು ತಾವು ಬೆಳೆದ ಈರುಳ್ಳಿಯನ್ನು ಕೊಂಡೊಯ್ದು ಮಾರಾಟ ಮಾಡಿ ಬಂದಿದ್ದಾರೆ.
ರೈತ ಮಹೇಶ್ ಒಟ್ಟು 60 ಚೀಲ, 3000 ಕೆಜಿ ಈರುಳ್ಳಿಯನ್ನು ಉಪೇಂದ್ರ ಅವರಿಗೆ ಮಾರಾಟ ಮಾಡಿದ್ದಾರೆ. ಸಾಗಾಟ ವೆಚ್ಚ ಸೇರಿಸಿ ೩೭ ಸಾವಿರ ಹಣ ಕೊಟ್ಟು ಈರುಳ್ಳಿ ಖರೀದಿಸಿರುವ ಉಪೇಂದ್ರ ಸಂಕಷ್ಟದಲ್ಲಿದ್ದ ರೈತನಿಗೆ ನೆರವಾಗಿದ್ದಾರೆ.
ನಟ ಉಪೇಂದ್ರ ಅವರು ಚಿಕ್ಕಬಳ್ಳಾಪುರ ರೈತನಿಂದ ಟೊಮೆಟೊ, ಇನ್ನೊಬ್ಬರಿಂದ ನೀರಿನ ಬಾಟಲ್, ಮತ್ತೊಬ್ಬ ದಾನಿಯಿಂದ ಅಕ್ಕಿ, ಇತರೆ ವಸ್ತುಗಳನ್ನು ಸಂಗ್ರಹಿಸಿ ಅವಶ್ಯಕತೆ ಇರುವವರಿಗೆ ವಿತರಣೆ ಮಾಡುತ್ತಿದ್ದಾರೆ. ಸಂಕಷ್ಟದಲ್ಲಿರುವ ರೈತರು ಹಾಗೂ ಬಡವರಿಗೆ ನೆರವಾಗುತ್ತಿರುವ ನಟ ಉಪೇಂದ್ರ ಅವರ ಸಾಮಾಜಿಕ ಕಳಕಳಿಯ ಬಗ್ಗೆ ಅನೇಕ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss