ರೈತರು ವೈಜ್ಞಾನಿಕ ಬೆಳೆ ಪದ್ಧತಿಯತ್ತ ಗಮನಹರಿಸಿ: ಸಚಿವ ಜೆ.ಸಿ.ಮಾಧುಸ್ವಾಮಿ ಕರೆ

ಹೊಸದಿಗಂತ ವರದಿ, ಚಿಕ್ಕೋಡಿ
ರೈತರು ವೈಜ್ಞಾನಿಕ ಬೆಳೆ ಪದ್ಧತಿಯತ್ತ ಗಮನಹರಿಸಬೇಕು. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಕುಡಿಯುವ ನೀರು ಹಾಗೂ ಕೃಷಿ ಭೂಮಿಗೆ ನೀರನ್ನು ಪೂರೈಸುವುದಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತೀದ್ದೇವೆ ಎಂದು ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ನಿಪ್ಪಾಣಿ ತಾಲೂಕಿನ ಕೊಡ್ನಿ ಗ್ರಾಮದ ಚಿಕೋತ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನೂತನ ಬ್ರಿಡ್ಜ್ ಕಮ್ ಬ್ಯಾರೇಜ್ ಅನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಜನರ ಬಳಿ ನಾಯಕ ಯಾರು ಎಂದರೆ ಮೋದಿ ಎಂದು ಹೇಳುತ್ತಾರೆ. ಕ್ಷೇತ್ರದ ಎಲ್ಲಾ ಜನರ ವಿಶ್ವಾಸಕ್ಕೆ ಗಳಿಸಲು ಪೂರಕ ಕೆಲಸಗಳನ್ನು ನಿರ್ವಹಿಸಿದರೆ ರಾಜಕಾರಣಿಗಳ ಬದುಕು ಸಾರ್ಥಕವಾದಂತೆ. ರೈತರಿಗೆ ಆಧಾರ ಸ್ತಂಬವಾಗಿ ಕೇಂದ್ರ ಹಾಗೂ ರಾಜ್ಯ ಬಿ.ಜೆ.ಪಿ ಸರಕಾರ ನಿಂತಿವೆ.  ಇಂದು ಲೋಕಾರ್ಪಣೆ ಮಾಡಿರುವ ಬ್ರಿಡ್ಜ್ ಕಮ್ ಬ್ಯಾರೇಜನಿಂದ ಕುಡಿಯುವ ನೀರು ಹಾಗೂ ಕೃಷಿ ಭೂಮಿಗೆ ನೀರನ್ನು ಪೂರೈಸಲು‌ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಲೋಕಾರ್ಪಣೆಗೊಳಿಸಿರುವ ಬ್ರಿಡ್ಜ್ ಕಮ್ ಬ್ಯಾರೇಜ್’ದಿಂದ ಕುಡಿಯುವ ನೀರು ಹಾಗೂ ಕೃಷಿ ಭೂಮಿಗೆ ಹೆಚ್ಚಿನ ಅನುಕೂಲವಾಗುತ್ತದೆ. 50 ಕೋಟಿ ರೂಪಾಯಿ ವೆಚ್ಚದಲ್ಲಿ ಸಣ್ಣನೀರಾವರಿ ಇಲಾಖೆಯಿಂದ 12 ಬ್ರಿಡ್ಜ್ ‌ಕಮ್ ಬ್ಯಾರೇಜ್ ನಿರ್ಮಾಣಕ್ಕೆ ಮಂಜೂರಾತಿ ದೊರೆತ್ತಿದೆ ಎಂದರು.
ಲೋಕಾರ್ಪಣೆ ವೇಳೆ ಸಂಸದ ಅಣ್ಣಾಸಾಹೇಬ‌ ಜೊಲ್ಲೆ ಇದ್ದರು. ಕೋಲ್ಹಾಪೂರ ಕನ್ನೇರಿ ಮಠದ ಅದೃಶ್ಯ ಕಾಡಸೀದ್ದೇಶ್ವರ ಸ್ವಾಮೀಜಿ ‌ಸಾನಿದ್ಯ ವಹಿಸಿದ್ದರು.
ಈ ಸಂಧರ್ಭ ಉಪವಿಭಾಗಧಿಕಾರಿ ಸಂತೋಷ ಕಾಮಗೌಡ, ನೀರಾವರಿ ಇಲಾಖೆಯ ಅಧಿಕಾರಿಗಳಾದ‌ ಮೃತ್ಯುಂಜಯ ಸ್ವಾಮೀಜಿ, ಸಹಕಾರ ರತ್ನ ಚಂದ್ರಕಾಂತ ಕೋಟಿವಾಲೆ,ಪಪ್ಪು ಪಾಟೀಲ,ಎಂ.ಪಿ.ಪಾಟೀಲ,ಜಯವಂತ ಭಾಟಲೆ,ನೀತಾ ಭಾಗಡೆ ಸೇರಿದಂತೆ ಕೋಡ್ನಿ ಗ್ರಾಮದ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!