ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರೈತರ ಬದುಕು ಉಳಿಯಬೇಕಾದರೆ ಮೈಷುಗರ್ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ: ಕೆಟಿಎಸ್

ದಿಗಂತ ವರದಿಮಂಡ್ಯ :

ಜಿಲ್ಲೆಯ ರೈತರ ಭವಿಷ್ಯ-ಬದುಕು ಉಳಿಯಬೇಕಾದರೆ ಮೈಷುಗರ್ ಕಾರ್ಖಾನೆ ಹಾಗೂ  ವೇರಿಯನ್ನು ಉಳಿಸಿಕೊಳ್ಳಬೇಕಾದ ಅನಿವಾರ‌್ಯತೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ತಿಳಿಸಿದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳೊಂದಿಗೆ ಮೈಷುಗರ್ ಅಧ್ಯಕ್ಷ ಬಿ. ಶಿವಲಿಂಗೇಗೌಡ ಅವರನ್ನು ಭೇಟಿ ಮಾಡಿ ಮೈಷುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿ ಮಾತನಾಡಿದ ಅವರು, ಜಿಲ್ಲೆಯ ಜೀವನಾಡಿಯಾಗಿರುವ ಕಾವೇರಿ ಹಾಗೂ ಮೈಷುಗರ್ ಕಾರ್ಖಾನೆಯನ್ನು ಉಳಿಸಿಕೊಳ್ಳುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಮಾತು ಕೊಟ್ಟಂತೆ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಏ. 25, 26 ಹಾಗೂ 27ರಂದು ಮೈಷುಗರ್ ವಿಶೇಷ ಷೇರುದಾರರ ಸಾಮಾನ್ಯ ಸಭೆಯನ್ನು ವೀಡಿಯೋ ಕಾನ್ಫೆರೆನ್ಸ್ ಮೂಲಕ ಆಯೋಜಿಸಿ, ಅದರಲ್ಲಿ 40 ವರ್ಷಗಳ ಕಾಲ ಮೈಷುಗರ್‌ನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ಕುರಿತಂತೆ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ. ಷೇರುದಾರರಿಗೆ ಇನ್ನೂ ನೋಟೀಸ್ ತಲುಪಿಲ್ಲಘಿ. ಆನ್‌ಲೈನ್ ಮೂಲಕ ಸಭೆ ನಡೆಸುವುದರಿಂದ ರೈತರಿಗೆ ತಿಳಿಯುವುದಿಲ್ಲಘಿ. ಕೋವಿಡ್ ಕಾರಣ ಸಭೆ ನಡೆಸುವಂತಿಲ್ಲಘಿ. ಈ ಎಲ್ಲ ಕಾರಣಗಳನ್ನು ಇಟ್ಟುಕೊಂಡು ಸಭೆಯನ್ನು ಮುಂದೂಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಅಧ್ಯಕ್ಷರನ್ನು ಆಗ್ರಹಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss