Sunday, August 14, 2022

Latest Posts

ಕೃಷಿ ಸಾಲ ಮರು ಪಾವತಿ ಅವಧಿ ವಿಸ್ತರಿಸಲು ರೈತರ ಆಗ್ರಹ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಕುಶಾಲನಗರ:

ಕೊರೋನಾ ಸಾಂಕ್ರಾಮಿಕ ಹಾಗೂ ಲಾಕ್ ಡೌನ್ ಹಿನ್ನೆಲೆಯಲ್ಲಿ ರೈತರು ಪಡೆದಿರುವ ಕೃಷಿ‌ ಸಾಲ ಮರುಪಾವತಿಯ ಅವಧಿಯನ್ನು ವಿಸ್ತರಿಸಬೇಕೆಂದು ಕುಶಾಲನಗರ ತಾಲೂಕು ವ್ಯಾಪ್ತಿಯ ರೈತರು ಆಗ್ರಹಿಸಿದ್ದಾರೆ.
ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ 12 ಕ್ಕೂ ಅಧಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ವ್ಯಾಪ್ತಿಯ ಸಾವಿರಾರು ರೈತರು ತಮ್ಮ ತಮ್ಮ ಸಹಕಾರ ಸಂಘಗಳ‌ ‌ಮೂಲಕ ರಾಜ್ಯ ಸರ್ಕಾರದ ಕೃಷಿ ಸಾಲ ಯೋಜನೆಯ  ಪ್ರಯೋಜನ ‌ಪಡೆದಕೊಂಡಿದ್ದಾರೆ.
ಆದರೆ ಕೊರೋನಾ ಮಾಹಾಮಾರಿ ಎಲ್ಲೆಡೆ ಹರಡುವುದರ ಜೊತೆಗೆ ಕೆಲವು ಸಹಕಾರ ಸಂಘಗಳ ಸಿಬ್ಬಂದಿಗಳಿಗೂ ಸೋಂಕು ತಗುಲಿ ಆಯಾ ವ್ಯಾಪ್ತಿಯ ಸಹಕಾರ ಸಂಘಗಳ ಕಾರ್ಯಚಟುವಟಿಕೆ ಸ್ಥಗಿತಗೊಂಡಿದೆ.
ರೈತರು ಆಯಾ ಸಹಕಾರ ಸಂಘಗಳಲ್ಲಿ ಪಡೆದ ಬೆಳೆ ಸಾಲವನ್ನು ಮರುಪಾವತಿಸಲು ಎಪ್ರಿಲ್ ಮತ್ತು ಮೇ  ಕೊನೆಯ ತಿಂಗಳಾಗಿದ್ದು, ಆದರೆ ಕೋವಿಡ್  ಸಂದರ್ಭಗಳಲ್ಲಿ ಸಹಕಾರ ಸಂಘಗಳಿಗೆ ರೈತರು ಬಂದು ಬೆಳೆ ಸಾಲದ ಹಣವನ್ನು ಕಟ್ಟಿ ನಂತರ ಮರು ಸಾಲ ಪಡೆಯು ಅರ್ಜಿಗಳನ್ನು ಸಲ್ಲಿಸಲು ಅನಾನುಕೂಲವಾಗಿದೆ.
ಸಂಘದಿಂದ ಪಡೆದ ಬೆಳೆ ಸಾಲವನ್ನು ಕಟ್ಟಲು ಕೊರೋನಾ ಸೊಂಕು ಮತ್ತು ಲಾಕ್ ಡೌನ್ ಅಡ್ಡಿಯಾಗಿರುವುದರಿಂದ ಏಪ್ರಿಲ್ ಮತ್ತು ಮೇ ತಿಂಗಳ ಕೃಷಿ ಸಾಲದ ಮರು ಪಾವತಿ ಅವಧಿಯನ್ನು ವಿಸ್ತರಣೆ ಮಾಡಬೇಕೆಂದು ಸಹಕಾರ ಸಂಘಗಳಿಂದ ಕೃಷಿ ಸಾಲ ಪಡೆದ ರೈತರ ಆಗ್ರಹವಾಗಿದೆ.
ಈ ಕುರಿತು ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ‌ಅವರ ಅಭಿಪ್ರಾಯ ಬಯಸಿದಾಗ, ಈಗಾಗಲೇ ಕೆಲ ಸಹಕಾರ ಸಂಘಗಳ ಸಿಬ್ಬಂದಿಗಳಿಗೆ ಸೋಂಕು ತಗುಲಿ ಕೆಲಸ ಸ್ಥಗಿತಗೊಂಡಿರುವುದು ಗಮನಕ್ಕೆ ಬಂದಿದೆ. ಅದರನ್ವಯ ರೈತರಿಗೆ ಅನುಕೂಲವಾಗುವಂತೆ ಮತ್ತು ರೋಗವನ್ನು ತಡೆಗಟ್ಟಲು ಅನುಕೂಲವಾಗುವಂತೆ ರೈತರು ಒಂದೆಡೆ ಸೇರಿ ಕೃಷಿ ಸಾಲವನ್ನು ಕಟ್ಟಿ ಮರುಸಾಲ ಪಡೆದು ಬೇಸಾಯ ಮಾಡಲು ಮುಂದಾಗುತ್ತಿರುವುದು ತಿಳಿದು ಬಂದಿದೆ.
ಈಗಾಗಲೇ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯ ಸಹಕಾರ ಸಚಿವರೊಂದಿಗೆ ಈ ಕುರಿತು ಚರ್ಚಿಸಲಾಗಿದ್ದು, ಕೃಷಿ ಸಾಲ ಮರು ಪಾವತಿಯ ಅವಧಿಯ ವಿಸ್ತರಣೆಯಾಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss