Friday, March 5, 2021

Latest Posts

ರೈತ ಪ್ರತಿಭಟನೆಗೆ ಬೆಂಬಲ: ಪಾಕಿಸ್ಥಾನಿ ಧ್ವಜ ಪ್ರದರ್ಶನ

ಹೊಸದಿಗಂತ ಆನ್ ಲೈನ್ ಡೆಸ್ಕ್:

ರೈತ ಪ್ರತಿಭಟನೆಯಲ್ಲಿ ವಿದೇಶಿ ಹಸ್ತಕ್ಷೇಪದ ಬಗ್ಗೆ ಭಾರತವು ರಾಜತಾಂತ್ರಿಕವಾಗಿ ಸರಿಯಾದ ಪ್ರತ್ಯುತ್ತರವನ್ನೇ ನೀಡುತ್ತಿದೆ. ರೈತ ಪ್ರತಿಭಟನೆಯಲ್ಲಿ ವಿದೇಶಿ ಮಸಲತ್ತಿನ ಕುರಿತಂತೆಯೂ ಎಚ್ಚರಿಸುತ್ತಾ ಬಂದಿದೆ. ಇದೀಗ ಜರ್ಮನಿಯಲ್ಲಿ ರೈತ ಪ್ರತಿಭಟನೆಯ ಬೆಂಬಲಾರ್ಥ ನಡೆದ ಕಾರ್ಯಕ್ರಮವೊಂದರಲ್ಲಿ ಪಾಕಿಸ್ಥಾನಿ ಧ್ವಜವನ್ನು ಪ್ರದರ್ಶಿಸಿದ ಘಟನೆ ನಡೆದಿದೆ. ವಿಶೇಷವೆಂದರೆ ಈ ಕಾರ್ಯಕ್ರಮ ಆಯೋಜಿಸಿದ್ದು ಕಾಂಗ್ರೆಸ್‌ನ ವಿದೇಶಿ ಘಟಕ.

ಜರ್ಮನಿಯಲ್ಲಿರುವ ವಿದೇಶಿ ಕಾಂಗ್ರೆಸ್ ಪದಾಕಾರಿಗಳು ಸಂಘಟಿಸಿದ ಈ ಕಾರ್ಯಕ್ರಮದಲ್ಲಿ ಪಾಕಿಸ್ಥಾನಿ ಧ್ವಜ ಪ್ರದರ್ಶಿಸಿರುವ ಚಿತ್ರವು ಈಗ ಬಹಿರಂಗಗೊಂಡಿದೆ. ಪಾಕ್ ಧ್ವಜವನ್ನು ಹಿಡಿದಿರುವವರು ಕೂಡ ಕಾಂಗ್ರೆಸ್ ಪದಾಕಾರಿಗಳಾದ ರಾಜ್ ಶರ್ಮಾ ಮತ್ತು ಚರಣ್ ಕುಮಾರ್ ಎಂಬವರು.

ಬಿಜೆಪಿ ಮುಖಂಡ ಸುರೇಶ್ ನಕುವಾ ಈ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಕಾಂಗ್ರೆಸ್‌ನ ದೇಶವಿರೋಧಿ ಭಾವನೆ ಇದರಲ್ಲಿ ವ್ಯಕ್ತವಾಗುತ್ತಿದೆ ಎಂದಿದ್ದಾರೆ. ಈ ಘಟನೆಯ ಕುರಿತಂತೆ ಸರ್ವತ್ರ ಖಂಡನೆ ವ್ಯಕ್ತವಾಗತೊಡಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss