ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಳಿಯಾಳ ದಿಂದ ಯಲ್ಲಾಪುರ ಮಾರ್ಗದಲ್ಲಿ ಸಾಗುತ್ತಿದ್ದ ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ಕೆಎ 29 8743 ಲಾರಿಗೆ ಭಾಗವತಿಯಿಂದ ಹಳಿಯಾಳ ಮಾರ್ಗದಲ್ಲಿ ಬರುತ್ತಿದ್ದ ಕೆಎ 65 J 7885 ನಂ. ನ ಸ್ಪ್ಲೆಂಡರ್ ಬೈಕ್ ಲಾರಿಯ ಹಿಂಬದಿಯ ಚಕ್ರಕ್ಕೆ ಗುದ್ದಿ ಸಿಲುಕಿದ ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಸಿದ್ದು ಬೈರು ಜೋರೆ ವಯಸ್ಸು 19 ಹಾಗೂ ಬೈಕ್ ಹಿಂಬದಿ ಕುಳಿತಿದ್ದ ಮಹಿಳೆ ಜನಾಬಾಯಿ ಸಕಾರಾಮ ಪಾಂಡರಮೀಸೆ ವಯಸ್ಸು 35 ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಅಪಘಾತದ ಸಂಪೂರ್ಣ ಮಾಹಿತಿಯನ್ನು ಹಳಿಯಾಳ ಪೋಲೀಸ್ ರು ಸ್ಥಳಕ್ಕಾಗಮಿಸಿ ಸಂಗ್ರಹಿಸುತ್ತಿದ್ದು ಅಪಘಾತದಿಂದ ಆಗಿದ್ದ ರಸ್ತೆ ಸಂಚಾರವನ್ನು ಸುಗಮಗೊಳಿಸಿದ್ದಾರೆ. ಅಪಘಾತಕ್ಕೆ ಸಂಬಂಧಿಸಿ ಹಳಿಯಾಳ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಜಾರಿಯಲ್ಲಿದೆ.