ತಂದೆ ಆಯ್ತು, ಮಗ ಆಯ್ತು, ಈಗ ಅವರ ಮಗ: ಗೌಡ್ರ ಕುಟುಂಬದ ವಿರುದ್ಧ ಸುಮಲತಾ ವಾಗ್ದಾಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

4 ತಲೆಮಾರಿನಿಂದ ಒಂದೇ ಕುಟುಂಬಕ್ಕೆ ಅವಕಾಶ ಕೊಟ್ಟಿದ್ದೀರಾ. ತಂದೆ ಆಯ್ತು, ಮಗ ಆಯ್ತು ಇದೀಗ ಅವರ ಮಗ ಎಂದು ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ವಾಗ್ದಾಳಿ ನಡೆಸಿದರು.

ರಾಮನಗರದಲ್ಲಿ ಬಿಜೆಪಿ (BJP) ಬೂತ್ ಮಟ್ಟದ ಕಾರ್ತಕರ್ತರ ಸಭೆಯಲ್ಲಿ ಮಾತನಾಡಿದ ಸುಮಲತಾ ಅವರು, ಅಂಬರೀಶ್ ಅವರ ರಾಜಕೀಯ ಜೀವನ ಪ್ರಾರಂಭವಾಗಿದ್ದೇ ರಾಮನಗರದಿಂದ (Ramanagara). ರಾಮನಗರಕ್ಕೂ ನಮ್ಮ ಕುಟುಂಬಕ್ಕೂ ಸವಿಯಾದ ಸಂಬಂಧ ಇದೆ. ಬಿಜೆಪಿಯಲ್ಲಿ ಮಹಿಳೆಗೆ ಗೌರವ ಕೊಡುತ್ತಾರೆ. ಮಂಡ್ಯದಲ್ಲಿ ನನ್ನ ವಿರುದ್ಧ ಸ್ಪರ್ಧೆ ಮಾಡಿದವರೇ ಇಲ್ಲಿ ಸ್ಪರ್ಧೆ ಮಾಡಿದ್ದಾರೆ. ನಾನು ಒಂದು ಕುಟುಂಬದ ವಿರುದ್ಧ ಸ್ಪರ್ಧೆ ಮಾಡಿದ್ದೇ ಅವರ ದೃಷ್ಟಿಯಲ್ಲಿ ದೊಡ್ಡ ತಪ್ಪಾಯಿತು. ಹೆಣ್ಣು ಎಂಬ ಗೌರವ ಇಲ್ಲದೆ, ಮಾತುಗಳನ್ನಾಡಿದರು ಎಂದು ಜೆಡಿಎಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಚುನಾವಣೆಗೆ ಒಟ್ಟು 150 ಕೋಟಿ ಹಣ ಖರ್ಚು ಮಾಡಿದರು. ಆದರೆ ಮಂಡ್ಯದ ಜನ ನನ್ನ ಪರ ನಿಂತರು. ಭದ್ರಕೋಟೆ, ಜಾತಿ ಏನೆಲ್ಲಾ ತಂದರೂ ಮಂಡ್ಯದ ಜನ ಸ್ವಾಭಿಮಾನ ಮೆರೆದರು. ಅವರು ಆಡಳಿತ ಯಂತ್ರ ದುರ್ಬಳಕೆ ಮಾಡಿಕೊಂಡರು. ನಮ್ಮೂರಿಗೆ ನಮ್ಮೂರವರೇ ಸಾಕು. 4 ತಲೆಮಾರಿನಿಂದ ಒಂದೇ ಕುಟುಂಬಕ್ಕೆ ಅವಕಾಶ ಕೊಟ್ಟಿದ್ದೀರಾ. ತಂದೆ ಆಯ್ತು, ಮಗ ಆಯ್ತು, ಇದೀಗ ಅವರ ಮಗ. ಸಮರ್ಥ ಕಾರ್ಯಕರ್ತರು ಇಲ್ಲದ ಕ್ಷೇತ್ರದಲ್ಲಿ ಮಾತ್ರ ನಮ್ಮ ಕುಟುಂಬದವರು ನಿಲ್ಲಿಸುತ್ತೇನೆ ಎಂದು ಹೇಳುತ್ತಾರೆ. ಇವರಿಗೆ ರಾಮನಗರ, ಮಂಡ್ಯ, ಹಾಸನದಲ್ಲಿ ಒಬ್ಬರೇ ಒಬ್ಬ ಸಮರ್ಥ ಕಾರ್ಯಕರ್ತರನ್ನು ಬೆಳೆಸಲು ಸಾಧ್ಯವಾಗಲಿಲ್ಲವಾ ಎಂದು ಪ್ರಶ್ನಿಸಿದರು.

ಅಭಿಮಾನ ಏನೇ ಇರಲಿ. ಒಂದು ಕುಟುಂಬ ಮಾತ್ರ ಅಭಿವೃದ್ಧಿಯಾಗ್ತಿದೆ ಎಂದರೆ ಮನೆ ಮಕ್ಕಳು ಏನಾಗಬೇಕು? ಹಾಸನ ಅಭಿವೃದ್ಧಿ ಮಾಡೋದಕ್ಕೆ ನೀವು ವೋಟ್ ಹಾಕ್ಬೇಕಾ? ಹಾಸನದ ಅಭಿವೃದ್ಧಿಗೆ ಹಾಸನದವರು ವೋಟ್ ಹಾಕಿಕೊಳ್ಳಲಿ. ಮಂಡ್ಯ, ರಾಮನಗರದಲ್ಲಿ ಸ್ಥಳೀಯರನ್ನ ಅಯ್ಕೆ ಮಾಡಿ ಎಂದು ಜನತೆಗೆ ಕರೆ ನೀಡಿದರು.

ಯಾವ ರೈತರು ನೂರಾರು ಕೋಟಿ ಆಸ್ತಿ ಮಾಡಿದ್ದಾರೆ. ಡಿಕ್ಲೇರ್ ಮಾಡಿರೋದು ಇಷ್ಟು. ಮಾಡದೇ ಇರೋ ಲೆಕ್ಕ ಬೇರೆ ಇದೆ. ಜನಸಾಮಾನ್ಯರು ಇದನ್ನ ಪ್ರಶ್ನಿಸಬೇಕು. ರಾಮನಗರದಲ್ಲಿ ಎಷ್ಟು ಅಭಿವೃದ್ಧಿಯಾಗಿದೆ. ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!