spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹೆಣ್ಣುಮಗು ಹುಟ್ಟಿದ ಸಂಭ್ರಮಕ್ಕೆ ಫ್ರೀ ಪಾನಿಪುರಿ ಹಂಚಿದ ತಂದೆ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಹೆಣ್ಣುಮಕ್ಕಳು ಹುಟ್ಟಿದರೆ ಬೇಸರಪಟ್ಟುಕೊಳ್ಳುವ ಈ ಕಾಲದಲ್ಲೂ ಮನೆಗೆ ಲಕ್ಷ್ಮಿ ಬಂದಿದ್ದಾಳೆ ಎಂದು ಇಲ್ಲೊಬ್ಬ ವ್ಯಕ್ತಿ ಜನರಿಗೆ ಉಚಿತವಾಗಿ ಪಾನಿಪೂರಿ ಹಂಚಿದ್ದಾರೆ.
ಭೋಪಾಲ್‌ನ ಅಂಜಲ್ ಗುಪ್ತಾ ಎಂದ ಬೀದಿ ಬದಿ ವ್ಯಾಪಾರಿ ಹೆಣ್ಣು ಮಗು ಹುಟ್ಟಿದ್ದನ್ನು ಸಂಭ್ರಮಿಸಲು ಬರೋಬ್ಬರಿ 40  ಸಾವಿರ ರೂ. ಮೌಲ್ಯದ ಪಾನಿಪೂರಿ ಹಂಚಿದ್ದಾರೆ.
ಮಧ್ಯಪ್ರದೇಶದ ಕೋಲಾರ ನಗರದಲ್ಲಿ ಇವರದ್ದೇ ಪಾನಿಪುರಿ ಅಂಗಡಿ ಇದೆ. ಅಲ್ಲಿಗೆ ಬರುವ ಜನರಿಗೆ ಉಚಿತವಾಗಿ ಪಾನಿಪುರಿ ಹಂಚಿ ಸಂಭ್ರಮಿಸಿದ್ದಾರೆ.

ನಾನು ಯಾವಾಗಲೂ ಮಗಳು ಹುಟ್ಟಲಿ ಎಂದು ಬೇಡಿಕೊಳ್ಳುತ್ತಿದೆ. ಎರಡು ವರ್ಷದ ಹಿಂದೆ ಮಗ ಹುಟ್ಟಿದ. ಇದೀಗ ಮಗಳು ಹುಟ್ಟಿದ್ದಾಳೆ. ಇದು ದೇವರ ವರ ಎಂದು ಅಂಜಲ್ ಹೇಳುತ್ತಾರೆ.
ನಲವತ್ತು ಸಾವಿರ ಖರ್ಚು ಮಾಡಿ ಜನರಿಗೆ ಪಾನಿಪೂರಿ ನೀಡಿದೆ, ಆದರೆ ಮಗಳು ಹುಟ್ಟಿದ ಖುಷಿ ಮುಂದೆ ಇದೆಲ್ಲಾ ಏನೂ ಅಲ್ಲ, ಬಂದವರೆಲ್ಲ ಉಚಿತ ಪಾನಿಪುರಿ ತಿಂದು ಮಗಳಿಗೆ ಶುಭ ಹಾರೈಸಿದ್ದಾರೆ. ಇದು ಸಂತಸದ ವಿಷಯ ಎಂದು ಅಂಜಲ್ ಖುಷಿ ಹಂಚಿಕೊಂಡಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss