ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೇರಳ ವಿಧಾನಸಭೆಯಲ್ಲಿ ಆಡಳಿತ ಆರಂಭಿಸಲು ಸಜ್ಜಾಗುತ್ತಿದ್ದಾರೆ ಮಾವ-ಅಳಿಯ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕುಟುಂಬ ರಾಜಕಾರಣದಲ್ಲಿ ಮಕ್ಕಳು, ಮೊಮ್ಮಕ್ಕಳು ಒಂದೇ ಪಕ್ಷದಲ್ಲಿ ಮುಂದುವರೆದುಕೊಂಡು ಹೋಗುವ ಸಹಜ, ಆದರೆ ಇದೇ ಮೊದಲ ಬಾರಿಗೆ ಮಾವ-ಅಳಿಯ ಒಟ್ಟಾಗಿ ಆಡಳಿತದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹೌದು, ಇದೇ ಮೊದಲ ಬಾರಿ ಮಾವ ಹಾಗೂ ಅಳಿಯ ಕೇರಳ ವಿಧಾನಸಭೆಯಲ್ಲಿ ಶೀಘ್ರವೇ ಆಡಳಿತ ಆರಂಭಿಸಲು ಸಜ್ಜಾಗುತ್ತಿದ್ದು, ಹೊಸ ರಾಜಕೀಯ ಅಧ್ಯಾಯ ಬರೆಯಲು ತಯಾರಾಗುತ್ತಿದ್ದಾರೆ. ಅವರೇ ಪಿಣರಾಯಿ ವಿಜಯನ್ ಹಾಗೂ ಡೆಮಾಕ್ರೆಟಿಕ್ ಯೂತ್ ಫೆಡರೇಷನ್‌ನ ರಾಷ್ಟ್ರೀಯ ಅಧ್ಯಕ್ಷ ಮೊಹಮದ್ ರಿಯಾಸ್.
ಬೆಂಗಳೂರಿನಲ್ಲಿರುವ ಐಟಿ ಉದ್ಯಮಿ, ವಿಜಯನ್ ಅವರ ಪುತ್ರಿ ವೀಣಾ ಅವರ ಪತಿಯೇ ರಿಯಾಸ್. 2020ರ ಜೂನ್‌ನಲ್ಲ ವೀಣಾ ಹಾಗೂ ರಿಯಾಸ್ ಮದುವೆಯಾಗಿದ್ದರು.
ಪಿಣರಾಯಿ ವಿಜಯನ್ ಅವರು ಸುಮಾರು 50 ಸಾವಿರ ಮತಗಳ ಅಂತರದಲ್ಲಿ ಕಣ್ಣೂರು ಜಿಲ್ಲೆಯ ಧರ್ಮದಂನಲ್ಲಿ ಗೆಲುವು ಸಾಧಿಸಿದ್ದು, 44 ವರ್ಷದ ರಿಯಾಸ್, ಕೋಯಿಕ್ಕೋಡ್‌ನಲ್ಲಿನ ಬೇಪೋರ್‌ನಿಂದ ಆಯ್ಕೆಯಾಗಿದ್ದಾರೆ. ಯುವ ಮುಖಂಡ ರಿಯಾಸ್ ಈ ಹಿಂದೆ 2009ರ ಲೋಕಸಭಾ ಚುನಾವಣೆಯಲ್ಲಿಯೂ ಕೋಯಿಕ್ಕೋಡ್‌ನಿಂದ ಸ್ಪರ್ಧಿಸಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss