Sunday, August 14, 2022

Latest Posts

ತಂದೆ, ಜೊತೆಗಿದ್ದ ಮಹಿಳೆಯನ್ನು ಕೊಂದ ಮಗ

ದಿಗಂತ ವರದಿ ಮೈಸೂರು:

ಮಗನೇ ತನ್ನ ತಂದೆ ಹಾಗೂ ಅವರ ಜೊತೆಗಿದ್ದ ಮಹಿಳೆಯನ್ನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮೈಸೂರಿನ ಹೊರವಲಯದ ಶ್ರೀನಗರ ಬಡಾವಣೆಯಲ್ಲಿ ಘಟನೆ ನಡೆದಿದೆ.
ಶಿವಪ್ರಕಾಶ್ (56) ಮತ್ತು ಲತಾ (48) ಕೊಲೆಯಾದವರು. ಕೊಲೆ ಮಾಡಿದ ಸಾಗರ್ ನಾಪತ್ತೆಯಾಗಿದ್ದಾನೆ.
ಕೊಲೆಯಾದ ಶಿವಪ್ರಕಾಶ್ ಕೆ.ಜಿ ಕೊಪ್ಪಲು ನಿವಾಸಿಯಾಗಿದ್ದಾರೆ.ಶಿವಪ್ರಕಾಶ್ ರ ಸ್ನೇಹಿತ ನಾಗರಾಜ್ ಎಂಬಾತನ ಪತ್ನಿ ಲತಾ ಕೊಲೆಯಾದ ಮಹಿಳೆ.
ಮೈಸೂರಿನ ಶ್ರೀನಗರದ ನಿವಾಸಿಯಾಗಿರುವ ಲತಾ ಮನೆಯಲ್ಲಿ ಶಿವಪ್ರಕಾಶ್ ಇದ್ದಾಗ ಮನೆಗೆ ನುಗ್ಗಿದ ಸಾಗರ್ ಮಚ್ಚಿನಿಂದ ಮೊದಲು ತಂದೆಯ ಮೇಲೆ ದಾಳಿ ನಡೆಸಿದಿದ್ದಾನೆ.ತಡೆಯಲು ಬಂದ ಲತಾ ಹಾಗೂ ಈಕೆಯ ಮಗ ನಾಗಾರ್ಜುನನ ಮೇಲೂ ಹಲ್ಲೆ ನಡೆಸಿದ್ದಾನೆ.ಶಿವಪ್ರಕಾಶ್ ಹಾಗೂ ಲತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗಾಯಗೊಂಡಿರುವ ನಾಗಾರ್ಜುನ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಶಿವಪ್ರಕಾಶ್ ಸ್ನೇಹಿತ ನಾಗರಾಜ್ 2016 ರಲ್ಲಿ ಮೃತಪಟ್ಟಿದ್ದಾರೆ.ಹಲವು ವ್ಯವಹಾರಗಳಲ್ಲಿ ಇಬ್ಬರೂ ಭಾಗಿಯಾಗಿದ್ದರು. ಸಾವನ್ನಪ್ಪುವಾಗ, ತನ್ನ ಕುಟುಂಬದ ನಿರ್ವಹಣೆಯ ಜವಾಬ್ದಾರಿಯನ್ನ ನೋಡಿಕೊಳ್ಳುವಂತೆ ನಾಗರಾಜ್, ಗೆಳೆಯ ಶಿವಪ್ರಕಾಶ್ ಗೆ ಮನವಿ ಮಾಡಿದ್ದರು.ಈ ಬಗ್ಗೆ ಮಾತು ಕೊಟ್ಟ ಕಾರಣ ಶಿವಪ್ರಕಾಶ್ ಗೆಳೆಯನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು.ಇದರಿಂದ ಸಾಗರ್ ಬೇಸತ್ತಿದ್ದ.ತನ್ನನ್ನ ತಂದೆ ಕಡೆಗಣಿಸಿದ್ದಾರೆಂದು ಬೇಸತ್ತಿದ್ದ.ಈ ವಿಚಾರದಲ್ಲಿ ತಂದೆ ಹಾಗೂ ಮಗನ ನಡುವೆ ಆಗಾಗ ಗಲಾಟೆ ಆಗಿದೆ. ಇದಕ್ಕೆಲ್ಲಾ ಒಂದು ಅಂತ್ಯ ಕಾಣಿಸಬೇಕೆಂದು ನಿರ್ಧರಿಸಿದ್ದ ಸಾಗರ್ ಗುರುವಾರ ರಾತ್ರಿ ಲತಾ ಮನೆಯಲ್ಲಿ ಶಿವಪ್ರಕಾಶ್ ಇದ್ದಾಗ ಮನೆಗೆ ನುಗ್ಗಿ ಸಾಗರ್ ಕೃತ್ಯ ಎಸಗಿದ ಬಳಿಕ ಪರಾರಿಯಾಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ
ದಕ್ಷಿಣ ಠಾಣೆ ಪೋಲಿಸರು, ಪರಿಶೀಲನೆ ನಡೆಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss