ಟ್ರಂಪ್ ಮನೆ ಮೇಲಿನ ಎಫ್‌ಬಿಐ ದಾಳಿಯಲ್ಲಿ ಅತ್ಯಂತ ರಹಸ್ಯ ದಾಖಲೆಗಳು ವಶ: ವರದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫ್ಲೋರಿಡಾದ ಮನೆಯ ಮೇಲೆ ದಾಳಿ ನಡೆಸಿದ ಎಫ್‌ಬಿಐ ಏಜೆಂಟ್‌ಗಳು 11 ಬಾಕ್ಸ್‌ ಗಳಲ್ಲಿದ್ದ ವರ್ಗೀಕೃತ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳಲ್ಲಿ ಬೇಹುಗಾರಿಕೆ ಸೇರಿದಂತೆ ಕೆಲವು ʼಪ್ರಮುಖ ರಹಸ್ಯʼ ವಿಚಾರಗಳಿವೆ ಎಂಬುದನ್ನು ಗುರುತಿಸಲಾಗಿದೆ ಎಂದು ಅಮೆರಿಕ ನ್ಯಾಯಾಂಗ ಇಲಾಖೆ ತಿಳಿಸಿದೆ. ಬೇಹುಗಾರಿಕೆ ಕಾಯಿದೆ ಉಲ್ಲಂಘನೆ ಪ್ರಕರಕ್ಕೆ ಸಂಬಂಧಿಸಿದಂತೆಯೇ ಈ ದಾಳಿ ನಡೆದಿದೆ ಎಂಬ ವಿಚಾರವನ್ನು ಸ್ಪಷ್ಟಪಡಿಸಿದೆ.
ಪಾಮ್ ಬೀಚ್‌ನಲ್ಲಿರುವ ಟ್ರಂಪ್‌ ಗೆ ಸೇರಿದ ಮಾರ್-ಎ-ಲಾಗೊ ನಿವಾಸವನ್ನು ಎಫ್‌ಬಿಐ ಏಜೆಂಟ್‌ಗಳು ಶೋಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಚ್ ವಾರಂಟ್‌ನಲ್ಲಿ ದಾಳಿ ನಡೆಸಿದ ಹಿಂದಿನ ಉದ್ದೇಶವನ್ನು ಬಹಿರಂಗಪಡಿಸಲಾಗಿದೆ. ಟ್ರಂಪ್ ಮನೆಯಲ್ಲಿ ವಶಪಡಿಸಿಕೊಂಡ ಎಲ್ಲಾ ದಾಖಲೆಗಳನ್ನು ʼವರ್ಗೀಕರಿಸಲಾಗಿದೆʼ ಮತ್ತು ʼಸುರಕ್ಷಿತ ಸಂಗ್ರಹಣೆಯಲ್ಲಿʼ ಇರಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮೋಕ್ರಾಟ್ ಅಭ್ಯರ್ಥಿ ಜೋ ಬಿಡೆನ್ ವಿರುದ್ಧ ಸೋತ ನಂತರ 2021 ರ ಜನವರಿಯಲ್ಲಿ ಟ್ರಂಪ್ ಅವರು ಅಧಿಕಾರವನ್ನು ತೊರೆದಾಗ ದಾಖಲೆಗಳನ್ನು ಅಕ್ರಮವಾಗಿ ಬಚ್ಚಿಟ್ಟಿದ್ದಾರೆಯೇ ಎಂಬ ಫೆಡರಲ್ ತನಿಖೆಯ ಭಾಗವಾಗಿ ಈ ಹುಡುಕಾಟವನ್ನು ನಡೆಸಲಾಗಿದೆ.
ಈ ವಿಚಾರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡಿರುವ ಟ್ರಂಪ್‌, “ಅವರು ಏನನ್ನೂ ವಶಪಡಿಸಿಕೊಳ್ಳುವ ಅಗತ್ಯವಿರಲಿಲ್ಲ. ಅವರು(ಜೊ ಬಿಡೆನ್) ಈ‌ ವಿಚಾರದಲ್ಲಿ ರಾಜಕೀಯ ಮಾಡದೆ, ಮಾರ್-ಎ-ಲಾಗೋ ಮನೆಯನ್ನು ಪ್ರವೇಶಿಸದೆ, ಅವರು ಬಯಸಿದ ಸಮಯದಲ್ಲಿ ಆ ದಾಖಲೆಗಳೆಲ್ಗಲವನ್ನೂ ಪಡೆಯಬಹುದಾಗಿತ್ತು” ಎಂದು ರಿಪಬ್ಲಿಕನ್ ಉದ್ಯಮಿ-ರಾಜಕಾರಣಿ ಟ್ರಂಪ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!