Tuesday, August 16, 2022

Latest Posts

ಅಮೆರಿಕದ 5-11 ವರ್ಷದ ಮಕ್ಕಳಿಗೆ ಫೈಜರ್ ಲಸಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದಲ್ಲಿ 5ರಿಂದ 11 ವರ್ಷದ ಮಕ್ಕಳಿಗೆ ಫೈಜರ್ ಸಂಸ್ಥೆಯ ಲಸಿಕೆ ನೀಡಲು ಅಲ್ಲಿನ ಆಹಾರ ಮತ್ತು ಔಷಧಿ ಇಲಾಖೆ ಅನುಮೋದನೆ ನೀಡಿದೆ.
ಈ ಮೂಲಕ ಅಮೆರಿಕ ಕೊರೋನಾ ವಿರುದ್ಧದ ಹೋರಾಟದ ಅಭಿಯಾನದಲ್ಲಿ ಮತ್ತೊಂದು ಅಧ್ಯಾಯ ಆರಂಭಿಸಲಿದೆ. ಫೈಜರ್ ಬಯೋ ಎನ್ ಟೆಕ್ ನ ಕೋವಿಡ್ ಲಸಿಕೆಯನ್ನು ತುರ್ತು ಬಳಕೆಗೆ ಅನುಮೋದನೆ ಸಿಕ್ಕಿದೆ. ಇದು 5-11 ವರ್ಷದ ಮಕ್ಕಳಿಗೆ ಮೂರು ವಾರಗಳ ಅಂತರದಲ್ಲಿ 2 ಡೋಸ್ ಲಸಿಕೆ ನೀಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.
2 ಸಾವಿರ ಮಕ್ಕಳ ಮೇಲೆ ನಡೆಸಿದ ಕ್ಲಿನಿಕಲ್ ಪ್ರಯೋಗವು ಶೇ.91ರಷ್ಟು ಪರಿಣಾಮಕಾರಿಯಾಗಿದೆ ಎಂದು ವರದಿ ತಿಳಿಸಿದೆ. ನ.2 ಮತ್ತು 3 ರಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ & ಪ್ರಿವೆನ್ಷನ್ ಅಡ್ವೈಸರಿ ಗ್ರೂಪ್ ಕೊನೆಯ ಹಂತದ ಚರ್ಚೆ ನಡೆಸಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss