ಸಾಲಬಾಧೆ ಭಯ: ನೇಣುಬಿಗಿದುಕೊಂಡು ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಒಂದೇ ಕುಟುಂಬದ ಮೂರು ಮಂದಿ ಸಾಲಬಾಧೆ ತಾಳಲಾರದೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಪ್ಪಳದ ಗಂಗಾವತಿಯ ಪ್ರಶಾಂತನಗರದಲ್ಲಿ ನಡೆದಿದೆ. ಪ್ರಕಾಶ್‌, ಪತ್ನಿ ಪ್ರಭಾ ಹಾಗೂ ಮಗ ಶಶಾಂಕ್‌ ಮೃತರು. ಸದ್ಯ ಸ್ಥಳಕ್ಕೆ ಗಂಗಾವತಿ ಟೌನ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆಗೆ ನಡೆಸಿದ್ದಾರೆ. ಪ್ರಕಾಶ್‌ ರಾಯ್ಕರ್‌ ಜ್ಯುವೆಲರಿ ಶಾಪ್‌ ನಡೆಸುತ್ತಿದ್ದರು. ಬ್ಯುಸಿನೆಸ್‌ ಕಡಿಮೆ ಇದ್ದ ಕಾರಣ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಸಾಲ ತೀರಿಸಲಾಗದೇ ಇಡೀ ಕುಟುಂಬ ನೇಣಿಗೆ ಶರಣಾಗಿದೆ. … Continue reading ಸಾಲಬಾಧೆ ಭಯ: ನೇಣುಬಿಗಿದುಕೊಂಡು ಒಂದೇ ಕುಟುಂಬದ ಮೂವರು ಆತ್ಮಹತ್ಯೆ