ಹೊಸದಿಲ್ಲಿ: ಏಷ್ಯಾದ ಮಹಿಳಾ ಟೆನ್ನಿಸ್ ಆಟಗಾರ್ತಿಯರಿಗೆ 1963ರಲ್ಲಿ ಪ್ರಾರಂಭವಾಗಿದ್ದು, ಇದೀಗ ಭಾರತದ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಫೆಡ್ ಕಪ್ ಹಾರ್ಟ್ ಪ್ರಶಸ್ತಿಗೆ(FED CUP Heart Award) ನಾಮನಿರ್ದೇಶನಗೊಂಡಿದ್ದಾರೆ.
33 ವರ್ಷದ ಸಾನಿಯಾ ಮಿರ್ಜಾ ಜಿವನದಲ್ಲಿ ಈ ಫೆಡ್ ಕಪ್ ಫಲಿತಾಂಶ ಅತೀ ಹೆಮ್ಮೆ ತರಲಿದೆ. ಫೆಡ್ ಕಪ್ ಗೆ ನಾಮ ನಿರ್ದೇಶನಗೊಂಡ ಮೊದಲ ಭಾರತೀಯ ಟೆನ್ನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.
2003ರಿಂದ ಭಾರತೀಯ ಟೆನ್ನಿಸ್ ಆಟಗಾರ್ತಿಯಾಗಿ 18 ವರ್ಷಗಳ ಕಾಲ ಟೆನ್ನಿಸ್ ನಿಂದ ನನಗೆ ನನಗೆ ಯಶಸ್ಸು ಸಿಕ್ಕಿದೆ. ಸಾನಿಯಾ ಮಿರ್ಜಾ ಪ್ರಥಮವಾಗಿ ಭಾರತವನ್ನು ಫೆಡ್ ಕಪ್ ನಲ್ಲಿ ಪ್ರತಿನಿಧಿಸುತ್ತಿದ್ದಾರೆ ಎಂದು ಅಖಿಲ ಭಾರತೀಯ ಟೆನ್ನಿಸ್ ಅಸೋಸಿಯೇಷನ್ ಶುಭ ಹಾರೈಸಿದೆ.
ಈ ಫೆಡ್ ಕಪ್ ಹಾರ್ಟ್ ಅವಾರ್ಡ್ ನಲ್ಲಿ ನೆದರ್ಲ್ಯಾಂಡ್, ಕೆನಡಾ, ಸ್ಪೈನ್, ಲಟ್ವಿಯಾ, ಇಸ್ಟೋನಿಯಾ, ಲಕ್ಸುಂಬರ್ಗ್, ಮೆಕ್ಸಿಕೋ, ಪರಾಗೇ,ಬಾರತ ಮತ್ತು ಇಂಡೋನೇಶಿಯಾ ಸೇರಿದಂತೆ ವಿಶ್ವದ 10 ಟೆನ್ನಿಸ್ ಆಟಗಾರ್ತಿಯರು ನಾಮಿನೇಟ್ ಆಗಿದ್ದಾರೆ. ಫೆಟ್ ಕಪ್ ನ ವೋಟಿಂಗ್ ಮೇ.8ರಂದು ಬೆಳಗ್ಗೆ 9ಕ್ಕೆ ಅಂತ್ಯವಾಗಲಿದ್ದು, ಮೇ.11ರಂದು ವಿಜೇತರನ್ನು ಘೋಷಣೆ ಮಾಡಲಿದೆ.
Honored to be the first Indian to be nominated for the @FedCup heart award ❤️
Voting lines now open – here is the link?? https://t.co/dxDPkmtA1Y .. let’s bring it home guys ???? pic.twitter.com/rFWpJo4csj— Sania Mirza (@MirzaSania) May 1, 2020