ಟ್ವಿಟರ್​ ಬ್ಲ್ಯೂಟಿಕ್​ಗೆ ಶುಲ್ಕ: 16 ವರ್ಷಗಳಿಂದ ಖಾತೆ ಬಳಸುತ್ತಿದ್ದು, ಯಾಕೆ ಪಾವತಿಸಬೇಕು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದ ಮೊದಲ ಟ್ವಿಟರ್ ಬಳಕೆದಾರ ಕಲಾವಿದೆ, ಛಾಯಾಗ್ರಾಹಕಿ ನೈನಾ ರೆಧು ಅವರು ಬ್ಲ್ಯೂಟಿಕ್​ ಪಡೆಯಲು 8 ಅಮೆರಿಕನ್​ ಡಾಲರ್(656 ರೂಪಾಯಿ) ಮಾಸಿಕ ಪಾವತಿಗೆ ಆಕ್ಷೇಪಿಸಿದ್ದಾರೆ.

ಟ್ವಿಟರ್​ ಖರೀದಿಸಿದ ವಿಶ್ವದ ನಂ.1 ಶ್ರೀಮಂತ ಎಲಾನ್​ ಮಸ್ಕ್​ ಖಾತೆಯ ಬ್ಲ್ಯೂಟಿಕ್​(ಪರಿಶೀಲಿಸಿದ ಖಾತೆ)ಗೆ ಮಾಸಿಕವಾಗಿ 8 ಡಾಲರ್​ ಶುಲ್ಕ ವಿಧಿಸಿದ್ದಾರೆ. ಇದಕ್ಕೆ ವಿಶ್ವದಾದ್ಯಂತ ವಿರೋಧ ವ್ಯಕ್ತವಾಗಿದೆ.

ಭಾರತದಲ್ಲೂ ಶೀಘ್ರವೇ ಶುಲ್ಕ ನಿಯಮ ಜಾರಿ ಮಾಡಲು ಉದ್ದೇಶಿಸಿರುವ ಎಲಾನ್​ ​ಮಸ್ಕ್​ಗೆ ಭಾರತದ ಮೊದಲ ಟ್ವಿಟರ್​ ಖಾತೆ ಪಡೆದ ರಾಜಸ್ಥಾನದ ಜೈಸಲ್ಮೇರ್​ನಲ್ಲಿ ಉದ್ಯೋಗಿಯಾಗಿರುವ ನೈನಾ ರೆಧು ಅವರು ಶುಲ್ಕ ಪಾವತಿಗೆ ಆಕ್ಷೇಪವೆತ್ತಿದ್ದಾರೆ. 16 ವರ್ಷಗಳಿಂದ ಖಾತೆ ಬಳಸುತ್ತಿದ್ದು, ಈಗೇಕೆ ಶುಲ್ಕ ಎಂದು ಪ್ರಶ್ನಿಸಿದ್ದಾರೆ.

ಟ್ವಿಟರ್​ನಿಂದ 2006 ರಲ್ಲಿ ಮೊದಲ ಬಾರಿಗೆ ನೈನಾ ರೆಧು ಅವರಿಗೆ ಇ-ಮೇಲ್​ ಮೂಲಕ ಖಾತೆ ತೆರೆಯಲು ಕೋರಿಕೆ ಬಂದಿತ್ತು. TWTTR ಎಂದಿದ್ದ ಲಿಂಕ್​ ಅನ್ನು ಪ್ರವೇಶಿಸಿ ಖಾತೆ ತೆರೆದೆ. ಭಾರತದಲ್ಲಿ ತೆರೆದ ಮೊದಲ ಖಾತೆ ಇದೇ ಆಗುತ್ತದೆ ಎಂದು ನಾನು ಊಹಿಸಿರಲಿಲ್ಲ. ಇದೊಂದು ಕಾಕತಾಳೀಯ ಎಂಬಂತೆ ಮೊದಲ ಬಳಕೆದಾರಳಾದೆ. ಬಳಿಕ ಟ್ವಿಟರ್​ ಇಷ್ಟರಮಟ್ಟಿಗೆ ಸಕ್ಸಸ್​ ಕಾಣುತ್ತದೆ ಎಂದೂ ನಾನು ಅಂದುಕೊಂಡಿರಲಿಲ್ಲ ಎಂದು ನೈನಾ ಹೇಳಿದ್ದಾರೆ.

ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ನಾನು ಆರಂಭದಲ್ಲಿ ಹೆಚ್ಚಾಗಿ ಆಯಪ್​ ಬಳಕೆ ಮಾಡುತ್ತಿರಲಿಲ್ಲ. ಬಳಿಕ ಸ್ನೇಹಿತರಿಂದ, ಉದ್ಯೋಗಿಗಳಿಂದ ಸಂದೇಶ ಬರಲಾರಂಭಿಸಿದವು. ಮೊದಲು ನಾನು ಒಂದೂವರೆ ವರ್ಷ ಟ್ವಿಟರ್​ ಬಳಕೆ ಮಾಡಿರಲಿಲ್ಲ ಎಂದು ಅವರು ನೆನಪಿಸಿಕೊಂಡಿದ್ದಾರೆ.

ಈವರೆಗೂ 22 ಸಾವಿರ ಅನುಯಾಯಿಗಳನ್ನು ಹೊಂದಿರುವ, 16 ವರ್ಷಗಳಿಂದ 1 ಲಕ್ಷ 75 ಸಾವಿರ ಟ್ವೀಟ್​ ಮಾಡಿರುವ ನೈನಾ ಅವರು, ಬ್ಲ್ಯೂಟಿಕ್​ ಶುಲ್ಕ ಕುರಿತು ಮಾತನಾಡಿ, ಏಕೆ ಶುಲ್ಕ ವಿಧಿಸಲಾಗುತ್ತಿದೆ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಶುಲ್ಕ ಪಾವತಿಸಿದ ಬಳಿಕ ಬ್ಲ್ಯೂಟಿಕ್‌ ಹಾಗೆಯೇ ಉಳಿಯುತ್ತದೆ ಅಥವಾ ಬದಲಾಗುತ್ತದೆಯೇ?. ಈ ಬಗ್ಗೆ ಸ್ಪಷ್ಟತೆ ಸಿಕ್ಕಾಗಿ ಶುಲ್ಕ ಪಾವತಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ವ್ಯಕ್ತಿಯ ನಿಜವಾದ ಖಾತೆ ಎಂದು ಪರಿಶೀಲಿಸಲು ಅದಕ್ಕೆ ಹಣವನ್ನೇಕೆ ಪಾವತಿಸಬೇಕು. ಕಳೆದ 16 ವರ್ಷಗಳ ನಂತರ ನಾನು ಈಗ ಏಕೆ ಹಣ ನೀಡಬೇಕು ಎಂದು ಎಲಾನ್​ ಮಸ್ಕ್​ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!