ಟಿಕೆಟ್‌ ಪಡೆಯದ ಪ್ರಯಾಣಿಕರಿಂದ 1 ಕೋಟಿ ರೂ.ಗೂ ಅಧಿಕ ದಂಡ ವಸೂಲಿ ಮಾಡಿದ ಮಹಿಳಾ ಟಿಸಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಯಾಣಿಕರಿಂದ 1 ಕೋಟಿ ರೂ.ಗೂ ಅಧಿಕ ದಂಡ ವಸೂಲಿ ಮಾಡಿದ ಮಹಿಳಾ ಟಿಕೆಟ್‌ ತಪಾಸಣೆ ಸಿಬ್ಬಂದಿಯನ್ನು (Woman Ticket Checker) ರೈಲ್ವೆ ಸಚಿವಾಲಯ ಶ್ಲಾಘಿಸಿದೆ .

ದಕ್ಷಿಣ ರೈಲ್ವೆಯ ಮುಖ್ಯ ಟಿಕೆಟ್ ಪರಿವೀಕ್ಷಕಿ ರೋಸಲಿನ್ ಅರೋಕಿಯಾ ಮೇರಿ ಅವರು ಟಿಕೆಟ್ ಪಡೆಯದ ಪ್ರಯಾಣಿಕರಿಂದ 1.03 ಕೋಟಿ ರೂ. ದಂಡವನ್ನು ಸಂಗ್ರಹಿಸಿದ್ದಾರೆ .

ಈ ಕುರಿತು ರೈಲ್ವೇ ಸಚಿವಾಲಯ ಟ್ವಿಟರ್‌ ಮೂಲಕ ಹಂಚಿಕೊಂಡಿದ್ದು, ಟಿಕೆಟ್ ಪರೀಕ್ಷಕನ ಸಿಬ್ಬಂದಿ ರೋಸಲಿನ್ ಅರೋಕಿಯಾ ಮೇರಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೇರಿ ಪ್ರಯಾಣಿಕರಿಂದ ದಂಡವನ್ನು ಸಂಗ್ರಹಿಸುತ್ತಿರುವುದನ್ನು ಮತ್ತು ಪ್ರಯಾಣಿಕರಿಂದ ಟಿಕೆಟ್‌ಗಳನ್ನು ಪರೀಕ್ಷಿಸುತ್ತಿರುವ ಫೋಟೋವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ನ್ನ ಕರ್ತವ್ಯದಲ್ಲಿ ದೃಢವಾದ ಬದ್ಧತೆಯನ್ನು ತೋರಿಸುತ್ತಾ, GMSRailway ನ CTI (ಚೀಫ್ ಟಿಕೆಟ್ ಇನ್ಸ್‌ಪೆಕ್ಟರ್) ಶ್ರೀಮತಿ ರೊಸಲಿನ್ ಅರೋಕಿಯಾ ಮೇರಿ, ಅವರು 1.03 ಕೋಟಿ ರೂ. ದಂಡ ಸಂಗ್ರಹಿಸುವ ಮೂಲಕ ಭಾರತೀಯ ರೈಲ್ವೆಯ ಟಿಕೆಟ್ ತಪಾಸಣೆ ಸಿಬ್ಬಂದಿಯಲ್ಲಿ ಮೊದಲ ಮಹಿಳೆಯಾಗಿದ್ದಾರೆ. ಅನಿಯಮಿತ/ಟಿಕೆಟ್ ಪಡೆಯದ ಪ್ರಯಾಣಿಕರಿಂದ 1.03 ಕೋಟಿ ರೂ. ದಂಡ ಸಂಗ್ರಹ ಮಾಡಿದ್ದಾರೆ.

ಈ ಫೋಟೋ ಈಗ ಎಲ್ಲ ಕಡೆಯಲ್ಲೂ ವೈರಲ್ ಆಗಿದ್ದು, ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!