ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಬ್ಬದ ಸೀಸನ್ ಇದ್ದ ಅಕ್ಟೋಬರ್ ತಿಂಗಳಲ್ಲಿ ಭಾರತದ ಹೆದ್ದಾರಿಗಳಲ್ಲಿ ವಾಹನಗಳಿಂದ ಟೋಲ್ ಸಂಗ್ರಹ ನಿರೀಕ್ಷೆ ಮೀರಿಸುವಷ್ಟು ಆಗಿದೆ.
ಇತ್ತೀಚೆಗೆ ಬಿಡುಗಡೆಯಾದ ದತ್ತಾಂಶದ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಒಟ್ಟಾರೆ ಟೋಲ್ ಸಂಗ್ರಹ 6,114.92 ಕೋಟಿ ರೂ ಆಗಿದೆ. ಟೋಲ್ ಸಂಗ್ರಹದ ಮಾಹಿತಿ ಪಡೆಯಲು ಆರಂಭಿಸಿದಾಗಿನಿಂದ (2021ರಿಂದ) ಯಾವುದೇ ತಿಂಗಳಲ್ಲೂ ಇಷ್ಟು ಟೋಲ್ ಕಲೆಕ್ಷನ್ ಆಗಿರಲಿಲ್ಲ. ಇದೇ ಗರಿಷ್ಠ ಎನ್ನವ ದಾಖಲೆ ಮಾಡಿದೆ.
ಹಿಂದಿನ ಆರು ತಿಂಗಳ ಸರಾಸರಿ ತೆಗೆದುಕೊಂಡರೆ, ಅಂದರೆ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗಿನ ಅವಧಿಯಲ್ಲಿ ತಿಂಗಳಿಗೆ ಸರಾಸರಿಯಾಗಿ 5,681.46 ಕೋಟಿ ರೂನಷ್ಟು ಇ-ಟೋಲ್ ಸಂಗ್ರಹ ಆಗಿರುವುದು ಕಂಡು ಬಂದಿದೆ. ಅಕ್ಟೋಬರ್ ತಿಂಗಳಲ್ಲಿ ಟೋಲ್ ಕಲೆಕ್ಷನ್ ಹೆಚ್ಚಾಗಿರುವುದು ತೀರಾ ಅನಿರೀಕ್ಷಿತವಲ್ಲ. ಆ ತಿಂಗಳು ಹಬ್ಬದ ಸೀಸನ್ ಇದ್ದರಿಂದ ಜನರು ತಮ್ಮ ಊರಿಗೆ ಹೋಗಿ ಬರುವುದು ಸೇರಿದಂತೆ ವಾಹನ ಸಂಚಾರ ಸಹಜವಾಗಿ ಹೆಚ್ಚಾಗಿರಬಹುದು.