Tuesday, August 9, 2022

Latest Posts

ಉಳಿದಿರೋ ದೋಸೆ ಹಿಟ್ಟಿನಲ್ಲಿ ಮಾಡಿ ತುಪ್ಪದ ಈರುಳ್ಳಿ ದೋಸೆ.. ಈಸಿ ರೆಸಿಪಿ ಇಲ್ಲಿದೆ…

ಮನೆಯಲ್ಲಿ ದೋಸೆ ಹಿಟ್ಟು ಉಳಿದಿದ್ದರೆ ಅದಕ್ಕೆ ಪಡ್ಡು ಮಾಡಿಕೊಳ್ತೀರ. ಅದೇ ರೀತಿ ಈರುಳ್ಳಿ ದೋಸೆ ಕೂಡ ಮಾಡಬಹುದು. ಹೋಟೆಲ್‌ನಲ್ಲಿ ಈರುಳ್ಳಿ ಹಸಿಮೆಣಸು ಹಿಟ್ಟೊಳಗೆ ಹಾಕದೆ ಕ್ರಿಸ್ಪಿಯಾದ ದೋಸೆ ಮಾಡುತ್ತಾರೆ. ತುಪ್ಪದ ಈರುಳ್ಳಿ ದೋಸೆ ರೆಸಿಪಿ ಇಲ್ಲಿದೆ…

ಮಾಡುವ ವಿಧಾನ
ಈರುಳ್ಳಿ,ಹಸಿಮೆಣಸು,ಕ್ಯಾರೆಟ್ ಹೆಚ್ಚಿ, ತುರಿದು ಇಟ್ಟುಕೊಳ್ಳಿ.
ಈರುಳ್ಳಿ ತೆಳುವಾಗಿ ಉದ್ದ ಕತ್ತರಿಸಿ.
ನಂತರ ದೋಸೆ ಹಿಟ್ಟಿಗೆ ಸ್ವಲ್ಪ ಅಕ್ಕಿ ಹಿಟ್ಟು, ಉಪ್ಪು ಹಾಕಿ.
ನಂತರ ಓಂ ಕಾಳು, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ನ ರಸ ಹಾಕಿ.
ಹಂಚಿನ ಮೇಲೆ ದೋಸೆ ಹಿಟ್ಟು ಹಾಕಿದ ತಕ್ಷಣ ಈರುಳ್ಳಿ ಮಿಶ್ರಣ ಅದಕ್ಕೆ ಅಂಟಿಸಿ.
ಎರಡೂ ಭಾಗಕ್ಕೂ ತುಪ್ಪ ಹಾಕಿ ಕ್ರಿಸ್ಪಿಯಾಗುವ ವರೆಗೆ ಬೇಯಿಸಿದರೆ ಈರುಳ್ಳಿ ದೋಸೆ ರೆಡಿ…

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss